
ಕೋಲಾರ, ೨೯ ಏಪ್ರಿಲ್ (ಹಿ.ಸ) :
ಆ್ಯಂಕರ್ : ನಗರದ ಪಿ.ಸಿಬಡಾವಣೆಯ ರೇಣುಕಾಯಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವ ಮೇ.೧ ರಂದು ರಾತ್ರಿ ನಡೆಯುವ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ದೇವಾಲಯದ ಮುಂಭಾಗ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕರಗಮಹೋತ್ಸವ ಕಾರ್ಯಕ್ರಮಗಳು ಧ್ವಜಾರೋಹಣದೊಂದಿಗೆ ಇಂದು ಆರಂಭಗೊAಡಿದ್ದು, ಶ್ರೀಮತಿ ಆಂಡಾಳಮ್ಮ ಮೇಸ್ತಿç ಆಂಜಿನಪ್ಪ ಕುಟುಂಬದಿAದ ಪೂಜೆ ನಡೆದಿದ್ದು, ಏ.೩೦ರಂದು ದೀಪೋತ್ಸವ ಹಾಗೂ ಮೇ.೧ರಾತ್ರಿ ೮ ಗಂಟೆಗೆ ಹೂವಿನ ಕರಗಮಹೋತ್ಸವವಿದೆ.
ಮೇ.೨ ರಂದು ಸಂಜೆ ಅಗ್ನಿಕುಂಡ ಪ್ರವೇಶ ಹಾಗೂ ರಾತ್ರಿ ಭಾರತಪಠಣ ಹಾಗೂ ಮೇ.೩ ರಂದು ಸಂಜೆ ೫ ಗಂಟೆಗೆ ವಸಂತೋತ್ಸವ ಅಥವಾ ಒನಕೆ ಕರಗವಿದೆ ಎಂದು ರೇಣುಕಾ ಯಲ್ಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್ ತಿಳಿಸಿದರು.
ಈ ಭಾಗದ ಜನತೆಯಲ್ಲಿ ಸಾಮರಸ್ಯ, ಸೌಹಾರ್ದತೆ ಮೂಡಿಸುವಲ್ಲಿ ಈ ಕರಗಮಹೋತ್ಸವ ಪ್ರಮುಖ ಕಾರಣವಾಗಿದ್ದು, ಈ ಭಾಗದ ಜನತೆ ದೀಪೋತ್ಸವಲ್ಲಿ ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಸತತ ಮರ್ನಾಲ್ಕು ದಿನಗಳ ಕಾಲ ದೇವಾಲಯ ಇರುವ ಈ ರಸ್ತೆ ಜನಸಂದಣಿಯಿAದ ಕೂಡಿರಲಿದ್ದು, ಈ ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ.
ಕೋಲಾರದ ಜಯನಗರ, ಪಿಸಿ ಬಡಾವಣೆಯ ಈ ಕರಗ ಮಹೋತ್ಸವ ಅತ್ಯಂತ ಪ್ರಸಿದ್ದಿ ಪಡೆದಿದ್ದು, ಕರಗ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ದೇವಾಲಯದ ಮುಂಭಾಗದ ಟೇಕಲ್ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಗೋಪಿ,ಮೂರ್ತಿ, ಸಂತೋಷ್, ಮಾಜಿ ನಗರಸಭಾ ಸದಸ್ಯ ರಾಧಾಕೃಷ್ಣ, ದೇವಾಲಯ ಸಮಿತಿ ಉಪಾಧ್ಯಕ್ಷ ಚಂದ್ರಪ್ರಕಾಶ್, ದೇವಾಲಯ ಸಮಿತಿ ಖಜಾಂಚಿ ಕೆ.ಎಸ್.ಮಂಜುನಾಥ್, ಕರಗದ ಪೂಜಾರಿ ಬಿ.ವಿ.ಮಂಜುನಾಥ್, ಸಂತೋಷ್, ರ್ಮುಗಂ ಹಾಗೂ ರೇಣುಕಾ ಯಲ್ಲಮ್ಮ ಮಿತ್ರಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್