ಎಲ್ಜಿಡಿ ತಂತ್ರಜ್ಞಾನಕ್ಕೆ ಉತ್ತೇಜನ : ಐಐಜಿಜೆ–ಐಐಟಿ ಮದ್ರಾಸ್ ಒಡಂಬಡಿಕೆ
ಉಡುಪಿ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಲ್ಯಾಬ್-ಗ್ರೋನ್ ಡೈಮಂಡ್ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ ಮತ್ತು ಐಐಟಿ ಮದ್ರಾಸ್ ನಡುವೆ ಇನ್ಸೆಂಟ್ ಎಲ್ಜಿಡಿ ವೇದಿಕೆಯಡಿ ಒಡಂಬಡಿಕೆ ನಡೆಯಿತು. ಈ ಒಪ್ಪ
MOU


ಉಡುಪಿ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಲ್ಯಾಬ್-ಗ್ರೋನ್ ಡೈಮಂಡ್ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ ಮತ್ತು ಐಐಟಿ ಮದ್ರಾಸ್ ನಡುವೆ ಇನ್ಸೆಂಟ್ ಎಲ್ಜಿಡಿ ವೇದಿಕೆಯಡಿ ಒಡಂಬಡಿಕೆ ನಡೆಯಿತು. ಈ ಒಪ್ಪಂದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಕ್ಷಿಯಾದರು.

ಈ ಒಡಂಬಡಿಕೆಯಡಿ, ಲ್ಯಾಬ್-ಗ್ರೋನ್ ಡೈಮಂಡ್ ತಂತ್ರಜ್ಞಾನದಲ್ಲಿ ವಿಶೇಷವಾದ, ಉದ್ಯಮ ಆಧಾರಿತ ಪ್ರಮಾಣೀಕೃತ ಕೋರ್ಸ್ ಅನ್ನು ಪ್ರಾರಂಭಿಸಲಾಗುತ್ತದೆ. ಈ ತರಬೇತಿ ಕಾರ್ಯಕ್ರಮವು ಕೌಶಲ್ಯದ ಕೊರತೆಯನ್ನು ನೀಗಿಸುವುದರ ಜೊತೆಗೆ, ಉದ್ಯೋಗಕ್ಕೆ ಸನ್ನದ್ಧ ವೃತ್ತಿಪರರನ್ನು ರೂಪಿಸಲು ಮತ್ತು ಮೌಲ್ಯವರ್ಧಿತ ಉತ್ಪಾದನೆಯನ್ನು ಉತ್ತೇಜಿಸಲು ನೆರವಾಗಲಿದೆ.

ಇದೇ ವೇಳೆ, ಭಾರತದ ಎಲ್ಜಿಡಿ ಮೌಲ್ಯ ಸರಪಳಿಯಲ್ಲಿ ದೇಶದ ಸ್ಥಾನವನ್ನು ಬಲಪಡಿಸುವ ದಿಕ್ಕಿನಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಲಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಕಿಲ್ ಇಂಡಿಯಾ’ ಮೊದಲಾದ ರಾಷ್ಟ್ರೀಯ ಉಪಕ್ರಮಗಳಿಗೆ ಪೂರಕವಾಗಿ, ಸ್ವಾವಲಂಬಿ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಎಲ್ಜಿಡಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

2023-24ರ ಕೇಂದ್ರ ಬಜೆಟ್ನಲ್ಲಿ ಐಐಟಿ ಮದ್ರಾಸ್ನಲ್ಲಿ ಎಲ್ಜಿಡಿ ಸಂಶೋಧನೆಗಾಗಿ ಘೋಷಿಸಲಾದ ₹242 ಕೋಟಿ ಅನುದಾನವು ಈ ಕ್ಷೇತ್ರದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ನಿರ್ಮಾಣಕ್ಕೆ ಉತ್ತೇಜನ ನೀಡುತ್ತಿದೆ. ಇನ್ಸೆಂಟ್ ಉಪಕ್ರಮದ ಅಡಿಯಲ್ಲಿ, ಭಾರತದ ಮೊದಲ ಸ್ವದೇಶಿ ವಿನ್ಯಾಸದ ‘ಹೈ ಪ್ರೆಶರ್ ಹೈ ಟೆಂಪರೇಚರ್’ ಎಲ್ಜಿಡಿ ಯಂತ್ರದ ಮಾದರಿಯನ್ನು ಅಭಿವೃದ್ಧಿಪಡಿಸಿ, ಐಐಟಿ ಮದ್ರಾಸ್ನಲ್ಲಿ ಅಳವಡಿಸಲಾಗಿದೆ.

ಇದಕ್ಕೂ ಜೊತೆ, ಗುಣಮಟ್ಟದ ಮಾನದಂಡಗಳನ್ನು ಪರಿಶೀಲಿಸಲು ಆಮದು ಮಾಡಿಕೊಳ್ಳಲಾದ ವಾಣಿಜ್ಯ ಬಳಕೆಯ ಯಂತ್ರೋಪಕರಣಗಳನ್ನೂ ಅಲ್ಲಿ ಸ್ಥಾಪಿಸಲಾಗಿದೆ. ಈ ಕ್ರಮಗಳು ಭಾರತವನ್ನು ಲ್ಯಾಬ್-ಗ್ರೋನ್ ಡೈಮಂಡ್ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಆಟಗಾರನನ್ನಾಗಿ ರೂಪಿಸುವತ್ತ ದಿಟ್ಟ ಹೆಜ್ಜೆಯಾಗಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande