ಕೊಲಂಬಿಯಾದಲ್ಲಿ ಚುನಾವಣೆಗೆ ಮುನ್ನ ಭೀಕರ ಬಾಂಬ್ ಸ್ಫೋಟ ; 19 ಸಾವು
ಬೊಗೋಟಾ, 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಸೇರಿದ್ದು, ಸ್ಫೋಟದಲ್ಲಿ 38ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ದೇಶದ
ಭದ್ರತಾ ಪಡೆ


ಬೊಗೋಟಾ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಸೇರಿದ್ದು, ಸ್ಫೋಟದಲ್ಲಿ 38ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ದಾಳಿ ದೇಶದ ನೈಋತ್ಯ ಭಾಗದ ಕಾಕ ಪ್ರದೇಶದಲ್ಲಿರುವ ಪ್ಯಾನ್-ಅಮೆರಿಕನ್ ಹೆದ್ದಾರಿಯ ಎಲ್ ಟನಲ್ ಪ್ರದೇಶದಲ್ಲಿ ನಡೆದಿದೆ. ಜನಸಂದಣಿ ಹೆಚ್ಚಿರುವ ರಸ್ತೆ ಮಧ್ಯೆ ಸ್ಫೋಟ ಸಂಭವಿಸಿದ್ದರಿಂದ ಹಾನಿ ಪ್ರಮಾಣ ಹೆಚ್ಚಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸರಣಿ ಸ್ಫೋಟಗಳಿಂದ ಆತಂಕ

ಈ ದಾಳಿ ಒಂದೇ ಘಟನೆಯಲ್ಲದೆ, ಕಾಜಿಬಿಯೊ, ಎಲ್ ಟ್ಯಾಂಬೊ, ಪೊಪಾಯನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ವರದಿಯಾಗಿದ್ದು, ದೇಶದಾದ್ಯಂತ ಭದ್ರತಾ ಆತಂಕ ಹೆಚ್ಚಿಸಿದೆ. ಸೈನ್ಯದ ಉನ್ನತಾಧಿಕಾರಿಗಳು ಇದನ್ನು “ಅಪಾಯಕಾರಿ ದಾಳಿಗಳ ಅಲೆ” ಎಂದಿದ್ದಾರೆ.

ಭಯೋತ್ಪಾದಕ ದಾಳಿ ಶಂಕೆ

ಕೊಲಂಬಿಯಾ ಸರ್ಕಾರ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿದ್ದು, ರಾಷ್ಟ್ರಪತಿ ಗುಸ್ತಾವೊ ಪೆಟ್ರೋ ಅವರು ಈ ದಾಳಿಗೆ ಎಫ್ಎಆರ್ಸಿ ಬಂಡಾಯ ಗುಂಪು ಮತ್ತು ಅದರ ನಾಯಕ ಇವಾನ್ ಮಾರ್ಡಿಸ್ಕೊ ಹೊಣೆ ಎಂದು ಆರೋಪಿಸಿದ್ದಾರೆ.

ಮೇ 31ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಈ ದಾಳಿ ನಡೆದಿರುವುದು ದೇಶದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ರಾಷ್ಟ್ರೀಯ ಮಟ್ಟದ ಭದ್ರತಾ ಸಭೆ ಕರೆದಿದ್ದು, ರಕ್ಷಣಾ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande