ಮಕ್ಕಳಲ್ಲಿ ಭಾಷಾ ಅರಿವು ಹೆಚ್ಚಿಸಲು ಸಂಸ್ಕೃತ ಶಿಬಿರ
ಹುಬ್ಬಳ್ಳಿ, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಂಸ್ಕೃತ ಭಾರತಿ ವತಿಯಿಂದ ಹುಬ್ಬಳ್ಳಿಯ ವಿಶ್ವೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳಿಗಾಗಿ ಆಯೋಜಿಸಿದ್ದ ಹತ್ತು ದಿನಗಳ ಸರಳ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಡಾ. ಹುಕ್ಕೇರಿ ಹಾಗೂ ಶ್ರೀಮತಿ ತನುಜಾ
Camp


ಹುಬ್ಬಳ್ಳಿ, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಂಸ್ಕೃತ ಭಾರತಿ ವತಿಯಿಂದ ಹುಬ್ಬಳ್ಳಿಯ ವಿಶ್ವೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳಿಗಾಗಿ ಆಯೋಜಿಸಿದ್ದ ಹತ್ತು ದಿನಗಳ ಸರಳ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭ ಇಂದು ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಹುಕ್ಕೇರಿ ಹಾಗೂ ಶ್ರೀಮತಿ ತನುಜಾ ಪಾಟೀಲ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಹುಕ್ಕೇರಿ ಅವರು ಸಂಸ್ಕೃತ ಭಾಷೆಯ ಮಹತ್ವವನ್ನು ವಿವರಿಸಿ, “ಸಂಸ್ಕೃತ ಭಾಷೆ ಅಭ್ಯಾಸದಿಂದ ಮೆದುಳಿನ ವಿಕಾಸವಾಗುತ್ತದೆ. ಈ ಭಾಷೆಯ ಗ್ರಂಥಗಳಲ್ಲಿ ಅಪಾರ ಜ್ಞಾನ ಸಂಗ್ರಹವಿದ್ದು, ಅದನ್ನು ಅಳವಡಿಸಿಕೊಂಡರೆ ಮಾನವ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡಬಹುದು,” ಎಂದು ಹೇಳಿದರು. ವಿಶೇಷವಾಗಿ ಆಯುರ್ವೇದ ಕ್ಷೇತ್ರದಲ್ಲಿ ಸಂಸ್ಕೃತದ ಮಹತ್ವವನ್ನು ಅವರು ಉಲ್ಲೇಖಿಸಿದರು.

ಶ್ರೀಮತಿ ತನುಜಾ ಪಾಟೀಲ ಮಾತನಾಡಿ, ನಗರದಲ್ಲಿನ ವಿವಿಧ ಭಾಗಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿ ಶ್ರೀಮತಿ ಪೂರ್ಣಿಮಾ ದುಶಿ, ಶ್ರೀಮತಿ ಜ್ಯೋತಿ ಸೋಲಂಕಿ, ಶ್ರೀಮತಿ ದಿವ್ಯಾ ರಾವ್, ಶ್ರೀಮತಿ ಸುಷ್ಮಾ ದುಶಿ ಹಾಗೂ ಶ್ರೀಮತಿ ನಿರ್ಮಲಾ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಮಕ್ಕಳಿಗೆ ಸಂಸ್ಕೃತದ ಮೂಲಭೂತ ತಿಳುವಳಿಕೆಯನ್ನು ನೀಡಿದರು.

ಈ ಶಿಬಿರವು ಮಕ್ಕಳಲ್ಲಿ ಸಂಸ್ಕೃತ ಭಾಷೆಯ ಮೇಲಿನ ಆಸಕ್ತಿ ಹೆಚ್ಚಿಸುವುದರೊಂದಿಗೆ ಸಂಸ್ಕೃತಿ ಅರಿವನ್ನೂ ವಿಸ್ತರಿಸಲು ಸಹಕಾರಿಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande