ಗಾಂಧಿನಗರ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮಗಳಲ್ಲಿ ಸಚಿವ ದಿನೇಶ್ ಗುಂಡೂರಾವ್ ಭಾಗಿ
ಬೆಂಗಳೂರು, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ವಾರ್ಡ್, ಸ್ವತಂತ್ರ ಪಾಳ್ಯ ಹಾಗೂ ಆಂಜನೇಯ ಬ್ಲಾಕ್ ಪ್ರದೇಶಗಳಲ್ಲಿ ನಡೆದ ಅಣ್ಣಮ್ಮ ದೇವಿ, ಕರುಮಾರಿಯಮ್ಮ ಮತ್ತು ಶನಿಮಹೇಶ್ವರ ದೇವರ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ದಿನೇಶ್ ಗುಂಡೂರಾವ್ ಭಾಗವಹಿಸಿ ದರ್ಶನ ಪ
Gundurao


ಬೆಂಗಳೂರು, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ವಾರ್ಡ್, ಸ್ವತಂತ್ರ ಪಾಳ್ಯ ಹಾಗೂ ಆಂಜನೇಯ ಬ್ಲಾಕ್ ಪ್ರದೇಶಗಳಲ್ಲಿ ನಡೆದ ಅಣ್ಣಮ್ಮ ದೇವಿ, ಕರುಮಾರಿಯಮ್ಮ ಮತ್ತು ಶನಿಮಹೇಶ್ವರ ದೇವರ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ದಿನೇಶ್ ಗುಂಡೂರಾವ್ ಭಾಗವಹಿಸಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಅನ್ನದಾನ ಸೇವೆಗೆ ಸಚಿವರು ಚಾಲನೆ ನೀಡಿ, ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ನಂತರ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಯೋಗಕ್ಷೇಮ ಹಾಗೂ ಪ್ರದೇಶದ ಮೂಲಭೂತ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಭಾಗವಹಿಸಿದ ಭಕ್ತರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಸಚಿವರು, ಜನಸಂಪರ್ಕದ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande