ಮೈಸೂರು–ಮುಜಾಫರ್ಪುರ ನಡುವೆ ಬೇಸಿಗೆ ವಿಶೇಷ ರೈಲು
ಹುಬ್ಬಳ್ಳಿ, 21 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆ ರಜೆಯ ವೇಳೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಮೈಸೂರು ಮತ್ತು ಮುಜಾಫರ್ಪುರ ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06243ರ ಮೈಸೂರು–ಮುಜಾಫರ್ಪುರ ವಿಶೇಷ ರೈಲು ಏಪ್ರಿಲ್
ಮೈಸೂರು–ಮುಜಾಫರ್ಪುರ ನಡುವೆ ಬೇಸಿಗೆ ವಿಶೇಷ ರೈಲು


ಹುಬ್ಬಳ್ಳಿ, 21 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆ ರಜೆಯ ವೇಳೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಮೈಸೂರು ಮತ್ತು ಮುಜಾಫರ್ಪುರ ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06243ರ ಮೈಸೂರು–ಮುಜಾಫರ್ಪುರ ವಿಶೇಷ ರೈಲು ಏಪ್ರಿಲ್ 22ರಂದು ಬೆಳಿಗ್ಗೆ 10:05ಕ್ಕೆ ಮೈಸೂರು ನಿಂದ ಹೊರಟು, ಏಪ್ರಿಲ್ 24ರಂದು ರಾತ್ರಿ 7:45ಕ್ಕೆ ಮುಜಾಫರ್ಪುರ ತಲುಪಲಿದೆ.

ಹಿಂತಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06244ರ ಮುಜಾಫರ್ಪುರ–ಮೈಸೂರು ವಿಶೇಷ ರೈಲು ಏಪ್ರಿಲ್ 25ರಂದು ರಾತ್ರಿ 10:45ಕ್ಕೆ ಮುಜಾಫರ್ಪುರದಿಂದ ಹೊರಟು, ಏಪ್ರಿಲ್ 28ರಂದು ಬೆಳಿಗ್ಗೆ 7:45ಕ್ಕೆ ಮೈಸೂರನ್ನು ತಲುಪಲಿದೆ.

ಈ ವಿಶೇಷ ರೈಲು ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು ನಿಲ್ದಾಣ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೇಟೆ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಭುವನೇಶ್ವರ, ಕಟಕ್, ಖರಗ್ಪುರ, ಬರ್ಧಮಾನ್, ಮಾಲ್ಡಾ ಟೌನ್, ಕತಿಹಾರ್, ಬರೌನಿ ಹಾಗೂ ಸಮಸ್ತಿಪುರ ಸೇರಿದಂತೆ ಅನೇಕ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ರೈಲಿನಲ್ಲಿ ಒಟ್ಟು 18 ಸಾಮಾನ್ಯ ವರ್ಗದ ಬೋಗಿಗಳಿದ್ದು, ದಿವ್ಯಾಂಗ ಸ್ನೇಹಿ ವಿಭಾಗ ಒಳಗೊಂಡಂತೆ 2 ಎಸ್ಎಲ್ಆರ್ ಬೋಗಿಗಳೂ ಇರಲಿವೆ.

ಇದೇ ವೇಳೆ, ಏಪ್ರಿಲ್ 20ರಂದು ಪ್ರಕಟಿಸಲಾಗಿದ್ದ ಎಸ್ಎಸ್ಎಸ್ ಹುಬ್ಬಳ್ಳಿ–ನ್ಯೂ ಟಿನ್ಸುಕಿಯಾ ಬೇಸಿಗೆ ವಿಶೇಷ ರೈಲು ಕುರಿತು ತಿದ್ದುಪಡಿ ಪ್ರಕಟಣೆ ಹೊರಡಿಸಲಾಗಿದೆ. ರೈಲು ಸಂಖ್ಯೆ 07325/07326ರ ಮಾರ್ಗಮಧ್ಯದ ನಿಲ್ದಾಣವಾಗಿ ತಪ್ಪಾಗಿ ದರ್ಭಾಂಗ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಅದರ ಸರಿಯಾದ ನಿಲ್ದಾಣ ಡಿಬ್ರುಗಢ್ ಆಗಿರುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande