ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಕಾಯಕದ ಅನುಭವ ಪಡೆದ ವಿದ್ಯಾರ್ಥಿಗಳು
ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಕಾಯಕದ ಅನುಭವ ಪಡೆದ ವಿದ್ಯಾರ್ಥಿಗಳು
ಕೋಲಾರ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಮೀನು ಹೊಂಡವನ್ನು ವೀಕ್ಷಿಸಿದರು. ಎತ್ತುಗಳನ್ನು ಸ್ಪರ್ಶಿಸಿ ಮುದಗೊಂಡರು.


ಕೋಲಾರ, ೧೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಮಣ್ಣಿನ ನಂಟು ಇಲ್ಲ. ಕೃಷಿ ಮತ್ತು ಪರಿಸರದ ಬಗ್ಗೆ ಶಾಲೆಗಳಲ್ಲಿ ಬೋಧಿಸಲಾಗುತ್ತದೆ. ಆದರೆ, ಅದು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಲುಪುವುದಿಲ್ಲ. ಬೇಸಿಗೆ ಬಂತೆ0ದರೆ ಎಲ್ಲೆಡೆ ಮಕ್ಕಳ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಕೋಲಾರದಲ್ಲಿ ಕೋಲಾರ ಸ್ಪೋಟ್ಸ್ ಕ್ಲಬ್ ಆಯೋಜಿಸಿರುವ ಬೇಸಿಗೆ ಶಿಬಿರ ವಿಭಿನ್ನವಾಗಿ ನಡೆಯುತ್ತಿದ್ದು, ಬೇಸಿಗೆ ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಕೋಲಾರ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ನೋಡಿ ಬೆರಗುಗೊಂಡರು.

ಮಣ್ಣಿನಲ್ಲಿ ಬೀಜದ ಉಂಡೆಗಳನ್ನು ಮಾಡಿ ಮಣ್ಣನ್ನು ಸ್ಪರ್ಶಿಸಿ ಮುದಗೊಂಡರು. ಮೀನು ಹೊಂಡದಲ್ಲಿ ಮೀನುಗಳಿಗೆ ಆಹಾರ ಹಾಕಿ ಮೀನುಗಳು ತೇಲುತ್ತಿದ್ದರೆ ಬೆರಗಿನಿಂದ ನೋಡಿದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಸು, ಎತ್ತು, ಕುರಿಗಳನ್ನು ಹತ್ತಿರದಿಂದ ನೋಡಿದರು. ಎತ್ತುಗಳ ಬೆನ್ನನ್ನು ಮುಟ್ಟಿ ವಿದ್ಯಾರ್ಥಿಗಳು ಸಂತಸಗೊAಡರು.

ಮಣ್ಣಿನ ಮಕ್ಕಳ ಬದುಕು ಮತ್ತು ಕೃಷಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೋಲಾರದಲ್ಲಿ ಅರ್ಥಪೂರ್ಣ ಕಾರ್ಯಕ್ರಮವೊಂದು ನಡೆಯಿತು. ಕೋಲಾರ ಸ್ಪೋರ್ಟ್ಸ್ ಕ್ಲಬ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಕೃಷಿ ಕಾಯಕದ ಅನುಭವ ಪಡೆದರು.

ಕೋಲಾರದ ಕೃಷಿ ವಿಜ್ಞಾನ ಕೇಂದ್ರ ಪುಟ್ಟ ಮಕ್ಕಳ ಕೃಷಿ ಪಾಠಶಾಲೆಯಾಗಿ ಪರಿವರ್ತನೆಯಾಯಿತು. ಶಿಬಿರದಲ್ಲಿ ಬೀಜ ಉಂಡೆ, ಬೀಜ ಬಿತ್ತನೆ, ಮೀನು ಸಾಕಾಣಿಕೆ, ಕೃಷಿ ಪ್ರಾಣಿಗಳ ಪರಿಚಯ ಸೇರಿದಂತೆ ರಸಪ್ರಶ್ನೆ ನಡೆಯಿತು. ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳ ಪ್ರಾತ್ಯಕ್ಷತೆಯಲ್ಲಿ ಭಾಗವಹಿಸಿ ಕೃಷಿಯ ಬಗ್ಗೆ ಮಾಹಿತಿ ಪಡೆದರು.

ಶಿಬಿರಾರ್ಥಿ ಸುದೀಪ್ತಿ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ರಸಪ್ರಶ್ನೆ ಸ್ಪರ್ಧೆ ನಡೆಯಿತು. ಗಿಡಗಳ ಕಸಿಯ ಬಗ್ಗೆ ಮಾಹಿತಿ ಪಡೆಯಲಾಯಿತು ಎಂದು ತಿಳಿಸಿದರು.

ಮತ್ತೊಬ್ಬ ಶಿಬಿರಾರ್ಥಿ ಹಿತಶ್ರೀ ಮಾತನಾಡಿ ಇಲ್ಲಿನ ಪರಿಸರ ನೋಡಿ ತುಂಬಾ ಖುಷಿಯಾಯಿತು. ಬೀಜದ ಉಂಡೆ ತಯಾರಿಸುವುದು ಹೇಗೆ ಮತ್ತು ಮೀನುಗಳನ್ನು ಹೇಗೆ ಸಾಕುತ್ತಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತು ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಆಶಾ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆಗಳನ್ನು ಪರಿಚಯಿಸುವುದು ನಮ್ಮ ಉದ್ದೇಶ. ಸಸ್ಯಾಭಿವೃದ್ಧಿ, ಕಸಿ ಕಟ್ಟುವಿಕೆ ಮತ್ತು ನಾಟಿ ವಿಧಾನಗಳ ಬಗ್ಗೆ ಅವರಿಗೆ ಪ್ರಾತ್ಯಕ್ಷತೆ ಮೂಲಕ ಅರಿವು ಮೂಡಿಸಿದ್ದೇವೆ ಎಂದರು.

ಕೋಲಾರ ಸ್ಪೋರ್ಟ್ಸ್ ಕ್ಲಬ್ ಸಂಯೋಜಕ ಪುರುಷೋತ್ತಮ್ ಮಾತನಾಡಿ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಪ್ರತಿ ವರ್ಷ ನಿರಂತರವಾಗಿ ನಡೆಸಲಾಗುತ್ತಿದೆ. ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗದೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಯೋಗ್ಯಾಭ್ಯಾಸ ಕಲಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಶಿವಾನಂದ ಹೊಂಗಲ್ ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳು ಕೃಷಿಯಿಂದ ದೂರವಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ. ಚಿಕ್ಕ ವಯಸ್ಸಿನಲ್ಲೇ ಮಾಹಿತಿ ನೀಡಿದರು. ಪರಿಣಾಮಕಾರಿಯಾಗಿ ಅವರನ್ನು ತಲುಪುತ್ತದೆ. ಇಂತಹ ಸಮಯದಲ್ಲಿ ಮಣ್ಣಿನ ನಂಟನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕೊರತೆ ಇದೆ. ಚಿಕ್ಕ ವಯಸ್ಸಿನಲ್ಲೇ ಅವರಿಗೆ ಬೆಳೆಗಳು, ಪ್ರಾಣಿಗಳು ಮತ್ತು ಕೃಷಿಯ ಬಗ್ಗೆ ಅರಿವು ಮೂಡಿಸಿದರೆ ಅದು ಭವಿಷ್ಯದಲ್ಲಿ ಉಪಯುಕ್ತವಾಗುತ್ತದೆ. ಆ ನಿಟ್ಟಿನಲ್ಲಿ ಈ ಬೇಸಿಗೆ ಶಿಬಿರ ನಡಸಲಾಯಿತು ಎಂದು ತಿಳಿಸಿದರು.

ವಿದ್ಯಾರ್ಥಿಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಿ, ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒಟ್ಟು ಸುಮಾರು ೪೫೦೦ ಸೀಡ್ ಬಾಲ್ಗಳನ್ನು ತಯಾರಿಸಿ, ಪರಿಸರ ಸಂರಕ್ಷಣೆ ಮತ್ತು ವೃಕ್ಷಾರೋಪಣೆಯ ಮಹತ್ವವನ್ನು ಅರಿತುಕೊಂಡರು.

ಇದರ ಜೊತೆಗೆ, ವಿದ್ಯಾರ್ಥಿಗಳಿಗೆ ನರ್ಸರಿ ಹಾಗೂ ಸಸ್ಯ ಪ್ರಚಾರ (ಪ್ರೊಪಗೇಷನ್) ತಂತ್ರಜ್ಞಾನಗಳು ಪರಿಚಯಿಸಲಾಯಿತು. ಅವರು ಸ್ವತಃ ಬೀಜ ಬಿತ್ತನೆ, ನೀರಾವರಿ ಮಾಡುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಮೀನು ಸಾಕಾಣಿಕೆ, ಹಾಲುಗಾರಿಕೆ (ಡೈರಿ), ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಅಜೋಲಾ ಹಾಗೂ ವರ್ಮಿಕಂಪೋಸ್ಟ್ ಘಟಕಗಳನ್ನು ಭೇಟಿ ನೀಡಿ ತಿಳಿದುಕೊಂಡರು. ವಿದ್ಯಾರ್ಥಿಗಳು ಸ್ವತಃ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಅನುಭವಾತ್ಮಕ ಕಲಿಕೆಯನ್ನು ಪಡೆದರು.

ಕಾರ್ಯಕ್ರಮದ ಭಾಗವಾಗಿ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಜ್ಞಾನವನ್ನು ಪ್ರದರ್ಶಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಆನಂದ್, ಡಿಎಫ್ಒ (ಸೋಶಿಯಲ್ ಫಾರೆಸ್ಟ್ರಿ), ಜಿ.ಪಂ. ಕೋಲಾರ ಅವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ಸ್ಪೋರ್ಟ್ಸ್ ಕ್ಲಬ್ನ ಸ್ವಯಂಸೇವಕರ ಶ್ರೀ ಸುರೇಶ್ ಬಾಬು, ವಿಜ್ಞಾನಿಗಳಾದ ಡಾ. ಅನಿಲ್ ಕುಮಾರ್ ಎಸ್. ಡಾ. ಮಂಜುನಾಥ ರೆಡ್ಡಿ, ಡಾ. ಶಶಿಧರ್ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande