ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆಗಳ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಧಾರವಾಡ, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : 2026-27 ನೇ ಸಾಲಿಗೆ ಧಾರವಾಡ ಜಿಲ್ಲೆಯಲ್ಲಿನ 13 ಅಲ್ಪಸಂಖ್ಯಾತರ ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆಗಳ 6 ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. 5 ನೇ ತರ
ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆಗಳ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಧಾರವಾಡ, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2026-27 ನೇ ಸಾಲಿಗೆ ಧಾರವಾಡ ಜಿಲ್ಲೆಯಲ್ಲಿನ 13 ಅಲ್ಪಸಂಖ್ಯಾತರ ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆಗಳ 6 ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

5 ನೇ ತರಗತಿ ಪಾಸಾದ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ (ಒಬಿಸಿ) ಶೇ.25 ಸೀಟುಗಳು ಲಭ್ಯವಿದೆ ಹಾಗೂ ಪ್ರವೇಶ ಪಡೆದ ಖಾಲಿ ಇರುವ ಸ್ಥಾನಗಳಿಗೆ 7ನೇ, 8ನೇ ಮತ್ತು 9ನೇ ತರಗತಿವರೆಗೆ ಧಾರವಾಡ ಜಿಲ್ಲೆಯಲ್ಲಿರುವ ಮೌಲಾನಾ ಆಜಾದ ಮಾದರಿ ಶಾಲೆಗಳಿಗೆ ಪ್ರವೇಶಕ್ಕಾಗಿ ಪೋರ್ಟಲ್ ಲಿಂಕ್:https:// sevasindhuservices.karnataka.gov.in/ ಆನ್ಲೈನ್ ಮೂಲಕ ಮೇ 15, 2026 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಧಾರವಾಡ-0836-2971590, ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ಧಾರವಾಡ-9886383284, 8095052640, ಮುಖ್ಯೋಪಾಧ್ಯಾಯರು ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ನವನಗರ ಹುಬ್ಬಳ್ಳಿ-9743404329, ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ಸದಾಶಿವನಗರ ಹುಬ್ಬಳ್ಳಿ-9480407898, ಮುಖ್ಯೋಪಾಧ್ಯಾಯರು,ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ನವಲಗುಂದ-8497847789, ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರ ಧಾರವಾಡ-9738287549, ಹುಬ್ಬಳ್ಳಿ-8867718261, ನವಲಗುಂದ-8746894524 ಸಂಪರ್ಕಿಸಬಹುದು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande