ನಾರಿ ಶಕ್ತಿ ಅವಕಾಶ ಕಿತ್ತುಕೊಂಡ ಕಾಂಗ್ರೆಸ್ : ಆರ್. ಅಶೋಕ
ಬೆಂಗಳೂರು, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ದೇಶದಲ್ಲಿ ನಾರಿ ಶಕ್ತಿ ಮತ್ತಷ್ಟು ಮುನ್ನಡೆಯಲು ಐತಿಹಾಸಿಕ ಅವಕಾಶವೊಂದು ಸೃಷ್ಟಿಯಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ವಿರೋಧ ಪಕ್ಷಗಳು ಆ ಅವಕಾಶವನ್ನು ಕಿತ್ತುಕೊಂಡಿವೆ ಎಂದು ಪ್ರತಿ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಬೆಂ
Ashok


ಬೆಂಗಳೂರು, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ನಾರಿ ಶಕ್ತಿ ಮತ್ತಷ್ಟು ಮುನ್ನಡೆಯಲು ಐತಿಹಾಸಿಕ ಅವಕಾಶವೊಂದು ಸೃಷ್ಟಿಯಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ವಿರೋಧ ಪಕ್ಷಗಳು ಆ ಅವಕಾಶವನ್ನು ಕಿತ್ತುಕೊಂಡಿವೆ ಎಂದು ಪ್ರತಿ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾರಿ ಶಕ್ತಿ ಮುನ್ನಡೆಯಲು ಇನ್ನೂ ಒಂದೇ ಹೆಜ್ಜೆ ಬಾಕಿ ಇತ್ತು. ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಮತ್ತು ಸಾಮಾಜಿಕ ಶಕ್ತಿ ದೊರಕುವಂತಹ ಐತಿಹಾಸಿಕ ಅವಕಾಶವೂ ದೇಶದ ಮುಂದೆ ಇತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟದ ಪ್ರತಿ ಪಕ್ಷಗಳು ತಮ್ಮ ರಾಜಕೀಯ ನಿಲುವಿನ ಮೂಲಕ ಆ ಅವಕಾಶವನ್ನು ಕಸಿದುಕೊಂಡಿವೆ ಎಂದು ಅಶೋಕ ಆರೋಪಿಸಿದ್ದಾರೆ.

ಆದರೂ ಮುಂದಿನ ದಿನಗಳಲ್ಲಿ ನಾರಿಗೆ ಶಕ್ತಿ ಸಿಗುವುದು ಖಚಿತ. ಮಹಿಳೆಯರ ಸಬಲೀಕರಣದ ಹಾದಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande