ಅಮೆರಿಕದ ಕನ್ಸಾಸ್ನಲ್ಲಿ ಏಪ್ರಿಲ್ 20 ‘ಬಸವ ದಿನ’ ಘೋಷಣೆ : ಎಂ.ಬಿ. ಪಾಟೀಲ ಸಂತಸ
ಬೆಂಗಳೂರು, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಮೆರಿಕದ ಕನ್ಸಾಸ್ ರಾಜ್ಯದಲ್ಲಿ ಇದೇ ಏಪ್ರಿಲ್ 20ನ್ನು ‘ಬಸವ ದಿನ’ವೆಂದು ಘೋಷಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಬಸವಣ್ಣ ಅವರ ವಚನಗಳು, ತತ್ವಗಳು ಮತ್ತು ಚಿಂತನೆಗಳು ಒಂದು ಜಾತಿ ಅಥವಾ ಒಂದು ಭೂ ಪ್ರದೇಶಕ್ಕೆ ಸ
MB patil


ಬೆಂಗಳೂರು, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಮೆರಿಕದ ಕನ್ಸಾಸ್ ರಾಜ್ಯದಲ್ಲಿ ಇದೇ ಏಪ್ರಿಲ್ 20ನ್ನು ‘ಬಸವ ದಿನ’ವೆಂದು ಘೋಷಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಬಸವಣ್ಣ ಅವರ ವಚನಗಳು, ತತ್ವಗಳು ಮತ್ತು ಚಿಂತನೆಗಳು ಒಂದು ಜಾತಿ ಅಥವಾ ಒಂದು ಭೂ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಅವು ಜಾಗತಿಕ ಮೌಲ್ಯಗಳನ್ನು ಒಳಗೊಂಡಿದ್ದು, ಸದಾ ವಿಶ್ವಮಾನವೀಯ ಸಂದೇಶ ಸಾರುತ್ತವೆ ಎಂಬ ನಿಲುವನ್ನು ನಾವು ಪ್ರತಿಪಾದಿಸುತ್ತಲೇ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ಸಾಸ್ ರಾಜ್ಯದ ಗೌರ್ನರ್ ಲೌರಾ ಕೆಲ್ಲಿ ಅವರು ಈ ಬಾರಿಯ ಬಸವ ಜಯಂತಿಯ ದಿನವನ್ನು ‘ಬಸವ ದಿನ’ವೆಂದು ಘೋಷಿಸಿರುವುದು, ಬಸವ ಧರ್ಮ ಜಾಗತಿಕ ಧರ್ಮವಾಗಬೇಕು ಎಂಬ ಆಶಯಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

ಈ ಘೋಷಣೆ ಬಸವಭಕ್ತರಿಗೆ ಮಾತ್ರವಲ್ಲದೆ, ಕನ್ನಡಿಗರು ಸೇರಿದಂತೆ ಎಲ್ಲಾ ಭಾರತೀಯರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಕನ್ಸಾಸ್ ರಾಜ್ಯದ ಗೌರ್ನರ್ ಲೌರಾ ಕೆಲ್ಲಿ ಅವರಿಗೆ ಎಂ.ಬಿ. ಪಾಟೀಲ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದು, ಈ ಕಾರ್ಯಕ್ಕಾಗಿ ಶ್ರಮಿಸಿದ ಬಸವ ಸಮಿತಿಯ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande