
ಬೆಂಗಳೂರು, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪರಿಸರ ಸಂಬಂಧಿ ವಿದ್ಯಮಾನ ವರದಿಗಾರಿಕೆ ಮಾಡುವ ಬೆಂಗಳೂರಿನ ಪತ್ರಕರ್ತರಿಗಾಗಿ 28 ಏಪ್ರಿಲ್ 2026 ರಂದು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಪತ್ರಕರ್ತರು ಏಪ್ರಿಲ್ 24 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಬೇಸಿಗೆಯ ಬೇಗೆಯಿಂದ ನಮ್ಮ ಬೆಂಗಳೂರು ನಗರವನ್ನು ಕಾಪಾಡಲು ಹಾಗೂ ಪರಿಹಾರಗಳನ್ನು ಕಂಡುಹಿಡಿಯುವ ಅಕಾಡೆಮಿಯ ಈ ಪ್ರಯತ್ನಕ್ಕೆ ಕೈಜೋಡಿಸಿ ಎಂದು ಅಕಾಡೆಮಿ ಮನವಿ ಮಾಡಿದೆ.
ನೋಂದಾಯಿಸಲು ಈ ಗೂಗಲ್ ಫಾರ್ಮ್ ಬಳಸಿ -
https://forms.gle/BezdtiQ6F9rMMb146
ಹಿಂದೂಸ್ತಾನ್ ಸಮಾಚಾರ್ / Rakesh Mahadevappa