ಆಹಾರ ಭದ್ರತೆ ಸೇರಿದಂತೆ ಹಲವು ಒಪ್ಪಂದಗಳಿಗೆ ಭಾರತ-ಆಸ್ಟ್ರಿಯಾ ಸಹಿ
ರಾಜ್ ಘಾಟ್
Meeting


ನವದೆಹಲಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾ ದೇಶದ ಮುಖ್ಯಸ್ಥ ಕ್ರಿಶ್ಚಿಯನ್ ಸ್ಟಾಕರ್ ಅವರು ಗುರುವಾರ ಹೈದರಾಬಾದ್ ಹೌಸ್ನಲ್ಲಿ ಮಹತ್ವದ ಮಾತುಕತೆ ನಡೆಸಿದರು.

ಉಭಯ ದೇಶಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಆಹಾರ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಆಸ್ಟ್ರಿಯಾ ಒಪ್ಪಂದಗಳಿಗೆ ಸಹಿ ಹಾಕಿವೆ.

ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾಗವಹಿಸಿದ್ದರು. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಜಾಗತಿಕ ವಿಷಯಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತು ಚರ್ಚೆ ನಡೆಯಿತು.

ಇದಕ್ಕೂ ಮೊದಲು, ಆಸ್ಟ್ರಿಯಾ ದೇಶದ ಮುಖ್ಯಸ್ಥ ಕ್ರಿಶ್ಚಿಯನ್ ಸ್ಟಾಕರ್ ಅವರು ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದರು.

ಗಾಂಧೀಜಿಯವರ ಶಾಂತಿ, ಅಹಿಂಸೆ ಮತ್ತು ಸಾಮರಸ್ಯದ ಸಂದೇಶವನ್ನು ಸ್ಮರಿಸಿದ ಅವರು, ಬಾಪು ಅವರ ಆದರ್ಶಗಳು ಇಂದಿಗೂ ಜಗತ್ತಿಗೆ ದಾರಿ ತೋರಿಸುತ್ತಿವೆ ಎಂದು ಹೇಳಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ, ಆಸ್ಟ್ರಿಯಾ ದೇಶದ ಮುಖ್ಯಸ್ಥರು ರಾಜ್ ಘಾಟ್ ನಲ್ಲಿ ಬಾಪು ಅವರಿಗೆ ಗೌರವ ಸಲ್ಲಿಸಿ ಅವರ ಕಾಲಾತೀತ ಸಂದೇಶವನ್ನು ನೆನಪಿಸಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande