ಪಂಜಾಬಿನಲ್ಲಿ ಭೀಕರ ಬಸ್ ದುರಂತ ; 7 ಯಾತ್ರಿಕರ ಸಾವು, 21 ಮಂದಿಗೆ ಗಾಯ
ಚಂಡೀಗಡ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಂಜಾಬ್ ಫತೇಘರ್ ಸಾಹಿಬ್ ಜಿಲ್ಲೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಯಾತ್ರಿಕರು ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಸಹೋದರರು ಸೇರಿದಂತೆ ಒಂದೇ ಗ್ರಾಮದ ಐವರು ಪುರುಷರು ಸೇರಿದ್ದಾರೆ. ಎಲ್ಲರೂ
Accident


ಚಂಡೀಗಡ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಂಜಾಬ್ ಫತೇಘರ್ ಸಾಹಿಬ್ ಜಿಲ್ಲೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಯಾತ್ರಿಕರು ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಇಬ್ಬರು ಸಹೋದರರು ಸೇರಿದಂತೆ ಒಂದೇ ಗ್ರಾಮದ ಐವರು ಪುರುಷರು ಸೇರಿದ್ದಾರೆ. ಎಲ್ಲರೂ ಆನಂದಪುರ ಸಾಹಿಬ್ ನಲ್ಲಿ ನಡೆದ ವೈಶಾಖಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಊರಿಗೆ ಹಿಂದಿರುಗುತ್ತಿದ್ದರು.

ಮಾಹಿತಿಯ ಪ್ರಕಾರ, ಸುಮಾರು 40 ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್ ಹಿಮ್ಮತ್ಪುರ್ ಗ್ರಾಮದ ಸಮೀಪ ತಾಂತ್ರಿಕ ದೋಷಕ್ಕೆ ಒಳಗಾಯಿತು. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಯಿತು. ಕೆಲ ಗಾಯಾಳುಗಳ ಪ್ರಕಾರ, ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಬಸ್ನಲ್ಲಿ ವಿದ್ಯುದಾಘಾತದ ಪರಿಸ್ಥಿತಿಯೂ ಉಂಟಾಗಿತ್ತು.

ಯಾತ್ರಿಕರಲ್ಲಿ ಹೆಚ್ಚಿನವರು ಮೆನಮಜ್ರಾ ಗ್ರಾಮದಲ್ಲಿ ಇಳಿಯಬೇಕಾಗಿದ್ದರೂ, ಗ್ರಾಮ ತಲುಪುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಗಾಯಗೊಂಡವರಲ್ಲಿ 12 ಮಂದಿಯನ್ನು ಮೊರಿಂಡಾ ಆಸ್ಪತ್ರೆಗಳಿಗೆ ಮತ್ತು ಒಂಬತ್ತು ಮಂದಿಯನ್ನು ಫತೇಘರ್ ಸಾಹಿಬ್ ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಚಂಡೀಗಡ ಆಸ್ಪತ್ರೆಗೆ ಸಾಗಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶುಭಂ ಅಗರವಾಲ ಅವರ ಪ್ರಕಾರ, ಯಾತ್ರಿಕರು ಇಳಿಯಬೇಕಿದ್ದ ಸ್ಥಳ ಅಪಘಾತ ನಡೆದ ಸ್ಥಳದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು.

ಈ ಅಪಘಾತದಲ್ಲಿ ಜಗವಿಂದರ್ ಸಿಂಗ್, ಇಕ್ಬಾಲ್ ಸಿಂಗ್, ಲಖ್ಬೀರ್ ಸಿಂಗ್, ಹರ್ವೀರ್ ಸಿಂಗ್, ಪ್ರದೀಪ್ ಕೌರ್ ಮತ್ತು ರಂಜಿತ್ ಕೌರ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಸಹೋದರರಾದ ಲಖ್ಬೀರ್ ಸಿಂಗ್ ಮತ್ತು ಹರ್ವೀರ್ ಸಿಂಗ್ ಸೇರಿರುವುದು ಗ್ರಾಮಸ್ಥರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande