
ನವದೆಹಲಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಿಖ್ಖರ ಪವಿತ್ರ ಹಬ್ಬವಾದ ಬೈಸಾಖಿ ಹಾಗೂ ಒಡಿಯಾ ಹೊಸ ವರ್ಷವಾದ ಮಹಾ ಬಿಷುಬ ಪನಾ ಸಂಕ್ರಾಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತ್ಯೇಕ ಪೋಸ್ಟ್ಗಳ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ, ಬೈಸಾಖಿ ಹಬ್ಬದ ಸಂದರ್ಭದಲ್ಲಿ ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಳವಾಗಲಿ ಎಂದು ಹಾರೈಸಿದರು. ಈ ಹಬ್ಬವು ಶ್ರಮ, ಬೆಳೆ ಮತ್ತು ಸಮುದಾಯದ ಒಗ್ಗಟ್ಟಿನ ಪ್ರತೀಕವಾಗಿದ್ದು, ಎಲ್ಲರಿಗೂ ಹಿತಕರವಾಗಲಿ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮಹಾ ಬಿಷುಬ ಪನಾ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಈ ಹೊಸ ವರ್ಷವು ಎಲ್ಲರ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಯೋಗಕ್ಷೇಮವನ್ನು ತರಲಿ ಎಂದು ಪ್ರಾರ್ಥಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಇಂತಹ ಹಬ್ಬಗಳು ಭಾರತದ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯ ಪ್ರತೀಕವಾಗಿದ್ದು, ರಾಷ್ಟ್ರೀಯ ಏಕತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂಬ ಸಂದೇಶವನ್ನೂ ಪ್ರಧಾನಿ ತಮ್ಮ ಶುಭಾಶಯಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa