
ಕೊಪ್ಪಳ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಗರಸಭೆ ಆವರಣದಲ್ಲಿ 165ನೇ ದಿನದಿಂದ ಮುಂದುವರೆದಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಅತ್ಯಂತ ಅಪಾಯಕಾರಿ ಟಾರ್, ಉಕ್ಕು ಸಂಬಂಧಿತ ಮೆದು ಕಬ್ಬಿಣ, ಗೋಲಿ, ಕಾಸ್ಟಿಂಗ್ಸ್, ಇಂಡಸ್ಟ್ರೀಯಲ್ ಗ್ಯಾಸ್, ಕಲ್ಲಿದ್ದಲು ಸುಟ್ಟು ವಿದ್ಯುತ್ ತಯಾರಿಸುವ ಬಲ್ಡೋಟ ಶಾಸ್ವತವಾಗಿ ಇಲ್ಲಿಂದ ತೊಲಗಬೇಕು. ಈಗಿರುವ ಪೆಲ್ಲೆಟ್ ಘಟಕ ಕಡ್ಡಾಯವಾಗಿ ಬಂದ್ ಆಗಬೇಕು. ಆಗ ಕೊಪ್ಪಳ ಜನರ ಆರೋಗ್ಯ ಉಳಿಯುತ್ತದೆ ಎಂದರು.
ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಬಿ.ಜಿ.ಕರಿಗಾರ, ಶರಣು ಶೆಟ್ಟರ್, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ಪಂಪಣ್ಣ ಚಿಂತಪಲ್ಲಿ, ರಾಜಶೇಖರ ಏಳುಬಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹಾದೇವಪ್ಪ ಮಾವಿನಮಡು, ಸಂಜೀವದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ, ಗಂಗಮ್ಮ ಕುರುಗೋಡು, ಗವಿಸಿದ್ದಪ್ಪ ಚಿಕೇನಕೊಪ್ಪ, ವಿನಾಯಕ ರೆಡ್ಡಿ, ಬಸಪ್ಷ ಕಲಕೇರಿ, ಶಿವಪ್ಪ ಜಲ್ಲಿ, ವಿಜಯಮಹಾಂತೇಶ ಹಟ್ಟಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್