
ಚಿತ್ರದುರ್ಗ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಶ್ರಮಿಸಿದ ಸಾಧಕರಿಗೆ ನೀಡಲಾಗುವ ಚಿತ್ರದುರ್ಗ ಜಿಲ್ಲಾಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 14ರಂದು ಬೆಳಿಗ್ಗೆ 11 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು: ಚಿತ್ರದುರ್ಗದ ಡಿ. ಕುಮಾರಸ್ವಾಮಿ (ದಲಿತಪರ ಹಿರಿಯ ಹೋರಾಟಗಾರರು), ಹಿರಿಯೂರಿನ ಕೆ. ರಾಮಚಂದ್ರಪ್ಪ (ಸಮಾಜ ಸೇವೆ), ಚಳ್ಳಕೆರೆಯ ಟಿ. ವಿಜಯಕುಮಾರ್ (ವಕೀಲರು), ಮೊಳಕಾಲ್ಮುರಿನ ಟಿ. ಕರಿಬಸಪ್ಪ (ಹೋರಾಟಗಾರರು), ಹೊಸದುರ್ಗದ ಡಿ. ಸೋಮಶೇಖರ ಹಾಗೂ ಹೊಳಲ್ಕೆರೆಯ ಬಿ. ಜಯಪ್ಪ ಕೆಂಗುಂಟೆ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತರು: ಚಿತ್ರದುರ್ಗದ ಕೆ. ರಾಜಣ್ಣ (ದಲಿತಪರ ಹಿರಿಯ ಹೋರಾಟಗಾರರು), ಹಿರಿಯೂರಿನ ಬಿ.ಎಲ್. ನರಸಿಂಹಮೂರ್ತಿ (ದಲಿತಪರ ಹೋರಾಟಗಾರರು), ಚಳ್ಳಕೆರೆಯ ವೀರಭದ್ರಪ್ಪ (ಸಮಾಜ ಸೇವೆ), ಮೊಳಕಾಲ್ಮುರಿನ ಹೊನ್ನೂರಪ್ಪ, ಹೊಳಲ್ಕೆರೆಯ ಬಿ. ರವಿಕುಮಾರ್ ಹಾಗೂ ಹೊಸದುರ್ಗದ ಜೆ.ಆರ್. ತಿಪ್ಪೇಸ್ವಾಮಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa