
ಕೋಲಾರ, ೧೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸಾವಿರಾರು ವರ್ಷಗಳಷ್ಟು ಪುರಾತನವಾದ ರೋಣೂರು ವೈಕುಂಠಪುರದಲ್ಲಿ ಅರ್ಜುನ ಪ್ರತಿಷ್ಠಾಪಿತ ಶ್ರೀ ಲಕ್ಷಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ದೇವಾಲಯದ ಮುಂಭಾಗದ ರಥಬೀದಿಯಲ್ಲಿ ರಥೋತ್ಸವಕ್ಕೆ ಚಾಲನೆ ಸಿಕ್ಕಿದ್ದು, ನೆರೆದಿದ್ದ ಭಕ್ತರು ದವನ,ಹಣ್ಣು ಬೀಸಿ ತಮ್ಮ ಹರಕೆ ತೀರಿಸಿಕೊಂಡರು. ರಥೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಗ್ರಾಮದಲ್ಲಿ ಅದ್ದೂರಿ ಜಾತ್ರೆಯ ವೈಭವ ಕಂಡು ಬಂತು. ರಥೋತ್ಸವದ ಅಂಗವಾಗಿ ಲಕ್ಷಿö್ಮವೆಂಕಟೇಶ್ವರ ಸ್ವಾಮಿಗೆ ಕಲ್ಯಾಣೋತ್ಸವವನ್ನು ವೆಂಕಟರಾಜಭಟ್ಟರ್ ಜ್ಞಾಪಕಾರ್ಥ ಅವರ ಮಕ್ಕಳು ನಾಗರಾಜು, ಗುಮ್ಮರಾಜು ಇಮರಕುಂಟೆ ಅವರು ನಡೆಸಿಕೊಟ್ಟರು.
ಬ್ರಹ್ಮ ರಥೋತ್ಸವದ ಅಂಗವಾಗಿ ಎರಡೂ ದಿನಗಳ ಕಾಲ ರ್ಯ ವೈಶ್ಯರಿಗೆ ಬಂಗಾರಪೇಟೆಯ ಕೇರ್ಲ ರಾಮಯ್ಯಶೆಟ್ಟಿ ಮತ್ತು ಅವರ ಮಕ್ಕಳಿಂದ ಅನ್ನದಾಸೋಹ ಸೇವೆ ನಡೆಯಿತು. ಇದೇ ದಿನ ಕಶೆಟ್ಟಿಪಲ್ಲಿ ವೆಂಕಟಶಾಮಿರೆಡ್ಡಿ, ಕೆ.ಎಸ್.ಸತ್ಯನಾರಾಯಣರೆಡ್ಡಿ ಅವರಿಂದ ಅನ್ನದಾಸೋಹ ನಡೆಯಿತು. ಇದೇ ಸಂದರ್ಭದಲ್ಲಿ ರೋಣೂರು ಮಹಿಳೆಯರು ಪಾನಕ, ಕೋಸಂಬರಿ ವಿತರಿಸಿದರು. ರಥೋತ್ಸವದ ಅಂಗವಾಗಿ ಪುಷವಪವಿಮಾನೋತ್ಸವ, ಮುತ್ತಿನ ಪಲ್ಲಕ್ಕಿ,ಚಿತ್ರಗೋಪುರೋತ್ಸವ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿವೆ. ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಮಾರ್ಗದರ್ಶನದಲ್ಲಿ ರೋಣುರು ಲಕ್ಷಿವೆಂಕಟರಮಣ ದೇವಾಲಯದ ಅಭಿವೃದ್ದಿ ಸಮಿತಿ ಅಧ್ಯಕ್ಷ ಆರ್.ಪಿ.ರಾಮಚಂದ್ರ, ಕಾರ್ಯದರ್ಶಿ ಎಸ್.ಆರ್.ಪವಿತ್ರ, ಖಜಾಂಚಿ ಹಾಗೂ ಆರ್ಐ ಎನ್.ಸುಬ್ರಮಣಿ, ಸದಸ್ಯರಾದ ಅರ್.ಬಿ.ಚಿನ್ನಪ್ಪರೆಡ್ಡಿ, ಆರ್.ಎಂ.ನಟರಾಜ್, ಹೆಚ್.ಎ.ಸುಧಾ ಮತ್ತಿತರರು ನೇತೃತ್ವ ವಹಿಸಿದ್ದರು.
ರಥೋತ್ಸವಕ್ಕೆ ತಾಹಸೀಲ್ದಾರ್ ಅವರು ಪರವಾಗಿ ಆರ್ಐ ಸುಬ್ರಮಣಿ ಆಗಮಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಗ್ರಾ.ಪಂ ಮಾಜಿ ಸದಸ್ಯ ಆರ್.ಕೆ.ಎಸ್.ಮಂಜುನಾಥ್, ಕೆಪಿಸಿಸಿ ಸದಸ್ಯ ಎಲ್.ವಿ.ಗೋವಿಂದಪ್ಪ, ಮುಖಂಡರಾದ ಶ್ರೀರಾಮ್ಮಾಸ್ಟರ್, ಕೊತ್ತೊಳು ರೆಡ್ಡಪ್ಪ, ಮಿಟಾಯಿ ನಾರಾಯಣಸ್ವಾಮಿ, ಮಂಜುನಾಥ್, ಕೃಷ್ಣ ವರ್ಧನ್ ಮೋಹನ್ ಅರ್ಚಕರು ಹಾಗೂ ರೋಣೂರು ಗ್ರಾಮಸ್ಥರು ರಥೋತ್ಸವದ ನೇತೃತ್ವ ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್