
ಗದಗ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹೆಣ್ಣು ಮಕ್ಕಳಲ್ಲಿ ಪ್ರತಿಭೆ ಮತ್ತು ಪ್ರಾಮಾಣಿಕತೆ ಹೆಚ್ಚಿರುತ್ತದೆ. ಪ್ರತಿಭೆಗೆ ಅವಕಾಶ ಕೊಟ್ಟರೆ ಅವರು ಬೆಳೆದು ಸಮಾಜಕ್ಕೆ ಕೊಡುಗೆ ಕೊಡುವ ಶಕ್ತಿ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಇಂದು ಗದಗ ಜಿಲ್ಲೆಯ ಅಡವಿಸೋಮಾಪೂರ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರ ವಿದ್ಯಾಸಂಸ್ಥೆಯ ಶ್ರೀ ಎಮ್.ಬಿ.ಪಾಟೀಲ್ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿಯ ಕಾಲೇಜಿನ ವಿದ್ಯಾರ್ಥಿನಿ ಮಂಜುಳಾ ಹನುಮಂತಪ್ಪ ಹುಳಕಣ್ಣವರ ಪಿ.ಯು.ಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಮುಂಡರಗಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಗದಗ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಕ್ಕೆ ಅಭಿನಂದಿಸಿದರು.
ನಮ್ಮ ರಾಜ್ಯದಲ್ಲಿ ರಾಜ್ಯೊತ್ಸವ ಪ್ರಶಸ್ತಿ ಅತ್ಯಂತ ಉನ್ನತ ಪ್ರಶಸ್ತಿ ನಾನು ಇವತ್ತು ಕೊಟ್ಟಿರುವುದು ಅದಕ್ಕಿಂತ ಶ್ರೇಷ್ಟವಾಗಿದೆ. ನಮ್ಮ ತಾಯಿ ಮಂಜುಳಾ ಕತೆ ನಮ್ಮ ಇಡಿ ದೇಶದಲ್ಲಿ ಇಂತಹ ಕತೆಗಳಿವೆ ಇಲ್ಲಿ ಕುಳಿತ ತಾಯಂದಿರಿಗೆ ಅವಕಾಶ ಕೊಟ್ಟಿದ್ದರೆ ನಾವು ಶಿಕ್ಷಣ ಕಲಿಯುತ್ತಿದ್ದೇವು ಅಂತ ಅನಿಸುತ್ತದೆ.
ಈ ದೇಶದಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದೇವೆ ಇನ್ನಷ್ಟು ಸುಧಾರಣೆ ಆಗಬೇಕಿದೆ ಬಸವಣ್ಣನ ಕಾಲದಿಂದ ಸಮಾಜಿಕ ಸಮಾನತೆ ಲಿಂಗ ಬೇಧ ಇಲ್ಲದ ಸಮಾನತೆ ತರಬೇಕು ಅನ್ನುವುದು ಬಸವಣ್ಣನವರ ಚಿಂತನೆ ಆಗಿದೆ. ಅದಕ್ಕೆ ಅಕ್ಕ ಮಹಾದೇವಿ ಅತ್ಯಂತ ಮೇಧಾವಿ ವಚನಕಾರರಲ್ಲಿ ಒಬ್ಬರು, ಚನ್ನ ಮಲ್ಲಿಕಾರ್ಜುನ ಹೆಸರಿನಲ್ಲಿರುವ ಅವರ ವಚನಗಳು ಈಗಲೂ ಬದುಕಿಗೆ ದಾರಿದೀಪವಾಗಿವೆ ಎಂದು ಹೇಳಿದರು.
ತಾಯಿ ನೆನೆದು ಭಾವುಕರಾದ ಬೊಮ್ಮಾಯಿ
ತಾಯಿ ಪುರುಷರಿಗಿಂತ ಶ್ರೇಷ್ಟ, ಅಪ್ಪನಿಗಿಂತ ಶ್ರೇಷ್ಟ, ಜನ್ಮ ಪೂರ್ವದ ಸಂಬಂಧ ತಾಯಿಯ ಜೊತೆಗೆ ಮಾತ್ರ ಇರುತ್ತದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಜನ್ಮ ಪೂರ್ವದಲ್ಲಿಯೇ ಜ್ಞಾನ, ಬುದ್ದಿ ಶಕ್ತಿ ನೀಡಿರುತ್ತಾಳೆ. ನಾವು ಸಣ್ಣ ಮಕ್ಜಳಿಗೆ ಏನೂ ಗೊತ್ತಾಗುವುದಿಲ್ಲ ಅಂತ ಅಂದುಕೊಂಡಿರುತ್ತೇವೆ. ಅವರಿಗೆ ಎಲ್ಲವೂ ಅರ್ಥವಾಗುತ್ತವೆ. ಆದರೆ, ಹೇಳಲು ತೆಗೆದುಕೊಳ್ಳುತ್ತವೆ. ತಾಯಿ ಗರ್ಭದಿಂದ ಭೂಗರ್ಭದವರೆಗೆ ನಮ್ಮ ಬದುಕಿದೆ ತಾಯಿಗೆ ಅವಕಾಶ ಸ್ಥಾನ ಕೊಡುವಲ್ಲಿ ನಾವು ಹಿಂದಿದ್ದೇವೆ.ಯಾವಾಗ ಪ್ರತಿಯೊಬ್ಬ ಪುರುಷನಿಗೆ ಮಹಿಳೆ ಸಮಾನ ಆಗುತ್ತಾಳೊ ಆಗ ಈ ದೇಶ ಅಭಿವೃದ್ಧಿ ಆಗುತ್ತದೆ. ನಮ್ಮ ಮಂಜುಳಾಳನ್ನು ನೋಡಿದಾಗ ನಮ್ಮ ತಾಯಿ ನೆನಪಾಗುತ್ತಾಳೆ.
ಮುಂಡರಗಿ ಭಾಗದಲ್ಲಿ ಕಲಕೇರಿಯಲ್ಲಿ ಮದುವೆ ಆದ ಮೇಲೆ ಕಲಿತು ಉದ್ದಾರ ಆಗಿರುವುದು ಸಾಧನೆ. ನಮ್ಮ ತಾಯಿ ಹುಬ್ಬಳ್ಳಿಯಲ್ಲಿ ಇದ್ದರು ಅವರ ತಂದೆ ವಕೀಲರಿದ್ದರು. ನಮ್ಮ ತಾಯಿ ಗಣಿತ ಇಂಗ್ಲಿಷ್ ನಲ್ಲಿ ನಂಬರ್ ಒನ್ ಇದ್ದರು. ಆದರೂ ಅವರನ್ನು ಏಳನೆಯತ್ತೆಗೆ ಬಿಡಿಸಿದರು ಅದು ಅವರ ಮನಸಿಗೆ ನೊವಾಗುತ್ತಿತ್ತು. ಅವರ ಕನಸಲ್ಲಿ ಸರಸ್ವತಿ ಬರುತ್ತಿದ್ದಳು ಅದಕ್ಕೆ ಅವರು ಯಾವ ಮಕ್ಕಳು ಕಲಿಯಬೇಕೆಂದರೂ ಸಹಾಯ ಮಾಡುತ್ತಿದ್ದಳು. ಪ್ರತಿ ವರ್ಷ ತನಗೆ ಕಲಿಸಿದ ಶಿಕ್ಷಕರಿಗೆ ಸನ್ಮಾನ ಮಾಡುತ್ತಿದ್ದಳು. ಶಿಕ್ಷಕರ ಮೇಲೆ ಅಷ್ಟು ಗೌರವ ಇತ್ತು ಎಂದು ತಾಯಿ ನೆನೆದು ಭಾವುಕರಾದರು.
ಈಗ ಕಾಲ ಬದಲಾಗಿದೆ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಪ್ರತಿಭೆಗೆ ಅವಕಾಶ ಕೊಟ್ಟರೆ ಅವರು ಬೆಳೆದು ಸಮಾಜಕ್ಕೆ ಕೊಡುಗೆ ಕೊಡುವ ಶಕ್ತಿ ಬರುತ್ತದೆ. ನಮ್ಮ ಹಳ್ಳಿಯಲ್ಲಿ ಮದುವೆ ಆದರೆ ಶಿಕ್ಷಣ ಮುಂದುವರೆಯುತ್ತಿರಲಿಲ್ಲ. ಈಗ ಶಹರದಲ್ಲಿ ಬದಲಾಗಿದೆ. ಹೆಣ್ಣು ಮಕ್ಕಳಲ್ಲಿ ಪ್ರತಿಭೆ ಮತ್ತು ಪ್ರಾಮಾಣಿಕತೆ ಹೆಚ್ಚಿರುತ್ತದೆ. ಗಂಡನ ಮನೆಯಲ್ಲಿ ಇದ್ದು ಎಂ.ಬಿ. ಪಾಟೀಲರ ಕಾಲೇಜಿನಲ್ಲಿ ಓದಿ ಶಿಕ್ಷಕರು ಮಾರ್ಗದರ್ಶನ ಮಾಡಿದ್ದಾರೆ. ಎಸ್ಸೆ ಎಸ್ಸೆಲಸ್ಇಯಲ್ಲಿ 95% ತೆಗೆದುಡಿದ್ದು ಅದೇ ರೀತಿ ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದಿರುವುದು ಹೆಮ್ಮೆಯ ವಿಷಯ. ಮಂಜುಳಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಕೆಎಎಸ್ ಮಾಡಲಿ ಬಹಳಷ್ಡು ಜನರು ಕಷ್ಟದಲ್ಲಿ ಓದಿ ಮೇಲೆ ಬಂದಿದ್ದಾರೆ ಕಷ್ಟ ಎನ್ನುವುದು ಎಂಜಿನ್ ಇದ್ದ ಹಾಗೆ ಅದು ಪ್ರೇರಣೆ ನೀಡುತ್ತದೆ.
ಈ ತಾಯಿ ಎಲ್ಲಿಯವೆರಗೂ ಓದುತ್ತಾಳೆ ಅಲ್ಲಿಯವರೆಗೂ ಪೂರ್ಣ ಶಿಕ್ಷಣದ ವೆಚ್ಚವನ್ನು ನಮ್ಮ ಟ್ರಸ್ಟ್ ನಿಂದ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಾನು ಸಿಎಂ ಆಗಿ ಮೊದಲನೇ ನಿರ್ಧಾರ ರೈತರ ಮಕ್ಕಳಿಗೆ ಸ್ಕಾಲೃ ಶಿಪ್ ಕೊಡಿಸುವುದು ಮಾಡಿದ್ದೆ. ಯಾಕೆಂದರೆ ರೈತರ ಮಕ್ಕಳು ಎಸ್ ಎಸ್ ಎಲ್ ಸಿ, ಪಿಯುಸಿಗೆ ವಿದ್ಯಾಬ್ಯಾಸ ಮಾಡಿ ಬಿಡುತ್ತಾರೆ. ಅದಕ್ಕೆ ಅವರ ಮನೆತನ ಮುಂದೆ ಬರಬೇಕು ಅನ್ನುವ ಕಾರಣಕ್ಕೆ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲು ತೀರ್ಮಾನ ಮಾಡಿದ್ದೆ. ಸುಮಾರು 11 ಲಕ್ಷ ಮಕ್ಕಳು ತೆಗೆದುಕೊಂಡಿದ್ದರು. ಅದು ಮುಂದುವರೆದಿಲ್ಲ. ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಮತ್ತೆ ಅವಕಾಶ ಸಿಕ್ಕರೆ ಆ ಯೋಜನೆ ಮುಂದುವರೆಸುತ್ತೇವೆ. ಈ ಕಾರ್ಯಕ್ರಮ ಇತರ ಹೆಣ್ಣು ಮಕ್ಕಳಿಗೆ ಪ್ರೇರಣೆಯಾಗುತ್ತದೆ. ನಮ್ಮ ಮಗಳು ಲಂಡನ್ ಯುನಿವರ್ಸಿಟಿಯಲ್ಲಿ ಅರ್ಕಿಟೆಕ್ಚರ್ ಮಾಡಿ ಎರಡನೇ ರ್ಯಾಂಕ್ ಪಡೆದಿದ್ದಾಳೆ, ಅಷ್ಟೇ ಸಂತೋಷ ಮಂಜುಳಾ ನೋಡಿ ಆಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಎಸ್.ಎಸ್.ಪಾಟೀಲ್, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / lalita MP