ಮಾಲೂರಿನಲ್ಲಿ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿ
ಮಾಲೂರಿನಲ್ಲಿ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿ
ಮಾಲೂರಿನಲ್ಲಿ ಭಾನುವಾರ ನಡೆದ ಕ್ರಿಕೆಟ್ ಟರ್ನಿಯಲ್ಲಿ ಭೀಮಾ ಬುಲ್ಸ್ ತಂಡ ಟ್ರೋಫಿ ಪಡೆಯಿತು.


ಕೋಲಾರ, ಏಪ್ರಿಲ್ ೧೨(ಹಿ.ಸ) :

ಆ್ಯಂಕರ್ : ಕ್ರೀಡೆಗಳಿಂದ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ಇಂದಿನ ಯುವ ಪೀಳಿಗೆಯು ಮೊಬೈಲ್ ಮತ್ತು ಆಧುನಿಕ ಜೀವನಶೈಲಿಗೆ ಒಗ್ಗಿಕೊಳ್ಳುತ್ತಿದ್ದು, ಸದೃಢ ಸಮಾಜ ನರ್ಮಾಣಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ ಎಂದು ಜಯಮಂಗಲ ಗಾನಸುಧಾ ಕಲಾಸಂಸ್ಥೆ ಅಧ್ಯಕ್ಷ ಕೆ ಗೌತಮ್ ತಿಳಿಸಿದರು.

ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮೊದಲನೆಯ ಬಹುಮಾನ ಕೊಡುಗೆಯನ್ನು ನೀಡಿ ಗೌರವಿಸಿ ಮಾತನಾಡಿದರು.

ಮಾಲೂರು ತಾಲ್ಲೂಕು, ಲಕ್ಕೂರು ಹೋಬಳಿ, ಪುರ ಗ್ರಾಮದಲ್ಲಿ ಗಾನಸುಧಾ ಸಾಂಸ್ಕೃತಿಕ ಸಾಂಸ್ಥತಿಕ ಕಲಾ ಸಂಸ್ಥೆ ಮತ್ತು ಭೀಮಾ ಲಯನ್ಸ್

ಪ್ರಾಯೋಜನೆಯಲ್ಲಿ ಒಂದು ದಿನದ ೧೦ ಓವರ್ಗಳ ಕ್ರಿಕೆಟ್ ಟರ್ನಿಮೆಂಟ್ ಪಿಪಿಎಲ್ ಸೀಸನ್ ೫ ಭಾನುವಾರ ನಡೆಯಿತು. ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿಗಳು ಸಹಕಾರಿಯಾಗಿದ್ದು, ಕ್ರೀಡೆಯು ಜನರಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಸಹಕಾರ ಮನೋಭಾವನೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಕ್ರಿಕೆಟ್ ಟರ್ನಿಮೆಂಟ್ನಲ್ಲಿ ೩ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯವು ಭೀಮ ಬುಲ್ಸ್ ಮತ್ತು ಭೀಮ ಲಯನ್ಸ್ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಭೀಮಾ ಲಯನ್ಸ್ ರವರು ೫೫ ರನ್ಗಳನ್ನು ಮಾಡಿ ಟರ್ಗೆಟ್ ನೀಡಿತು. ಇದನ್ನು ಬೆನ್ನಟ್ಟಿದ ಭೀಮಾ ಬುಲ್ಸ್ ರವರು ಕೇವಲ ೭ ಓವರ್ಗಳಲ್ಲಿ ೫೮ ರನ್ಗಳನ್ನು ಗಳಿಸಿ ಜಯ ಸಾಧಿಸಿದರು.

ಪಂದ್ಯದಲ್ಲಿ ಉತ್ತಮ ಬ್ಯಾಟ್ಸ್ಮನ್ ಆಗಿ ಮೋಹನ್.ಆರ್, ಉತ್ತಮ ಬೌಲರ್ ಆಗಿ ಮನೋಜ್.ಎಂ. ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮೋಹನ್ ರವರು ಪಡೆದುಕೊಂಡರು.

ಈ ಸಂರ್ಭದಲ್ಲಿ ಅಂಬರೀಶ್. ವಿ, ಪ್ರದೀಪ್.ಎನ್, ಶಿವಪ್ಪ.ವಿ, ಮೋಹನ್.ಆರ್, ಸಿದ್ಧರ್ಥ್.ವಿ, ಪವನ್ ಕುಮಾರ್ ಎನ್, ಅರುಣ್.ಎಸ್, ಬಾಬು.ಎಸ್, ಮುನಿರಾಜು ಕೆ, ಪೃಥ್ವಿರಾಜ್, ನಾಗೇಶ್ ಬಾಬು, ಮುರಳಿ.ವಿ, ಹರೀಶ್.ಜಿ ಹಾಗೂ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande