ವಿಜಯಪುರ ಜಿಲ್ಲೆಗೆ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯ-ಎಬಿವ್ಹಿಪಿ ಆಕ್ರೋಶ
ವಿಜಯಪುರ, 06 ಮಾರ್ಚ್ (ಹಿ.ಸ.) ಆ್ಯಂಕರ್ : ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದ ಅನುದಾನ ಹಾಗೂ ಹೊಸ ಯೋಜನೆಗಳು ಘೋಷಣೆ ಆಗದಿರುವುದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ನಿರಾಸೆಯ ವಾತಾವರಣ ಕಂಡು ಬಂದಿದೆ ಎಂದು ವಿಜಯಪುರ ಎಬಿವಿಪಿ ಮುಖಂಡ ಪ್ರವೀಣ ಬಿರಾದಾರ್ ಬೇಸರ
ವಿಜಯಪುರ ಜಿಲ್ಲೆಗೆ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯ-ಎಬಿವ್ಹಿಪಿ ಆಕ್ರೋಶ


ವಿಜಯಪುರ, 06 ಮಾರ್ಚ್ (ಹಿ.ಸ.)

ಆ್ಯಂಕರ್ : ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದ ಅನುದಾನ ಹಾಗೂ ಹೊಸ ಯೋಜನೆಗಳು ಘೋಷಣೆ ಆಗದಿರುವುದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ನಿರಾಸೆಯ ವಾತಾವರಣ ಕಂಡು ಬಂದಿದೆ ಎಂದು ವಿಜಯಪುರ ಎಬಿವಿಪಿ ಮುಖಂಡ ಪ್ರವೀಣ ಬಿರಾದಾರ್ ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಅನೇಕ ವಿದ್ಯಾರ್ಥಿ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರು ಬಜೆಟ್ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಬಾರಿ ಸರ್ಕಾರದಿಂದ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ವಿದ್ಯಾರ್ಥಿವೇತನಗಳ ಹೆಚ್ಚಳ, ಹಾಗೂ ವಸತಿ ನಿಲಯಗಳ ಸಂಖ್ಯೆ ಹೆಚ್ಚಳ ಹಾಗೂ ಅವುಗಳ ಗುಣಮಟ್ಟ ಹೆಚ್ಚಳ ಹಾಗೂ ಹೊಸ ಶಿಕ್ಷಣ ಯೋಜನೆಗಳ ಘೋಷಣೆ ನಿರೀಕ್ಷಿಸಿದ್ದರು.

ಆದರೆ ಬಜೆಟ್ನಲ್ಲಿ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗದಿರುವುದರಿಂದ ವಿದ್ಯಾರ್ಥಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಕ್ಷೇತ್ರವು ದೇಶದ ಭವಿಷ್ಯ ರೂಪಿಸುವ ಪ್ರಮುಖ ಅಂಶವಾಗಿರುವುದರಿಂದ ಸರ್ಕಾರ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನಿಸಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಒಟ್ಟಾರೆ, ಇಂದಿನ ರಾಜ್ಯ ಬಜೆಟ್ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೊಸ ಘೋಷಣೆಗಳಿಲ್ಲದ ಕಾರಣ ವಿದ್ಯಾರ್ಥಿ ಸಮುದಾಯದಲ್ಲಿ ನಿರೀಕ್ಷೆಯಷ್ಟು ಸಂತೋಷ ಕಾಣಿಸದೇ ನಿರಾಸೆಯ ಮಾತುಗಳು ಕೇಳಿಬರುತ್ತಿವೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande