
ಕೋಲಾರ, ೦೬ ಮಾಚ್ (ಹಿ.ಸ) ಆಂಕರ್ : ಕೋಲಾರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು, ನರಸಾಪುರಕ್ಕೆ ಕೈಗಾರಿಕಾ ವಲಯ ಪೋಲಿಸ್ ಠಾಣೆ, ಹಾಗೂ ಪ್ರತಿ ತಾಲೂಕಿಗೆ ರೈತ ಮಾಲ್ನ್ನು ದಾಖಲೆಯ ೧೭ ನೇ ಬಜೆಟ್ ನಲ್ಲಿ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತ ಸಂಘದ ಮುಖಂಡ ರಾಮು ಶಿವಣ್ಣ ಅಭಿನಂದಿಸಿದ್ದಾರೆ.
ವೇಮಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಬಹು ದಿನಗಳ ಬೇಡಿಕೆಯಾದ ಕೋಲಾರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು, ಸುಮಾರು ನಾಲ್ಕೆöÊದು ವರ್ಷಗಳಿಂದ ನಿರಂತರವಾಗಿ ನಮ್ಮ ರೈತ ಸಂಘ ಹಾಗೂ ನರಸಾಪುರ ಭಾಗದ ಎಲ್ಲಾ ಮುಖಂಡರ ಸಹಕಾರದಿಂದ ಹಮ್ಮಿಕೊಂಡಿದ್ದ ಹೋರಾಟದ ಪ್ರತಿಫಲ ೨೦೨೬ರ ೧೭ ಬಜೆಟ್ ನಲ್ಲಿ ನರಸಾಪುರಕ್ಕೆ ಪೊಲೀಸ್ ಸ್ಟೇಷನ್ ಮಂಜೂರು ಮಾಡಿರುವುದು ಬಹಳ ಸಂತಸ ತಂದಿದೆ. ಪ್ರತಿ ತಾಲೂಕಿನಲ್ಲಿಯೂ ರೈತರ ಅನುಕೂಲಕ್ಕಾಗಿ ರೈತಮಾಲ್ ಸ್ಥಾಪನೆ ಮಾಡಲು ಬಜೆಟ್ ನಲ್ಲಿ ಮಂಡನೆ ಮಾಡಿರುವುದು ರೈತ ಸಂಘ ಸ್ವಾಗತ ಮಾಡಿದೆ.
ಆದರೆ ಕೆ,ಸಿ ವ್ಯಾಲಿ, ಎಚ್ಎನ್ ವ್ಯಾಲಿ ೩ನೇ ಹಂತದ ಶುದ್ಧೀಕರಣ ಮಾತೇ ಇಲ್ಲ ಯಾಕೆ. ಕನಿಷ್ಠ ಪಕ್ಷ ಕೃಷ್ಣಾ ನದಿಯ ನೀರಿನ ವಿಚಾರ ಪ್ರಸ್ತಾಪವೇ ಇಲ್ಲ ಎತ್ತಿನಹೊಳೆ ಕೂಡ ಮರೀಚಿಕೆಯಾಗಿದೆ. ಈ ವಿಚಾರಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಆಸೆಗೆ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ನಿರಾಶೆಗೊಳಿಸಿದ್ದಾರೆ.
ರೈತ ನಾಯಕ ದಿವಂಗತ ಸಿ ಬೈರೇಗೌಡರವರು ಪ್ರತಿನಿಧಿಸಿ ಶಾಸಕರು ಮಂತ್ರಿಯಾದ ವೇಮಗಲ್ ವಿಧಾನಸಭಾ ಕ್ಷೇತ್ರವನ್ನು ವೇಮಗಲ್ ತಾಲೂಕು ಕೇಂದ್ರವನ್ನಾಗಿ ಮಾಡಿ ವೇಮಗಲ್ ವಿಧಾನಸಭಾ ಕ್ಷೇತ್ರವಾಗಿ ಮರು ಸ್ಥಾಪನೆ ಮಾಡಬೇಕು. ಜೊತೆಗೆ ಕ್ಯಾಲನೂರುನ್ನು ಹೋಬಳಿ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ೩ ಕೋಟಿ ಹಣ ಪರಿಹಾರವಾಗಿ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಕೋಲಾರ ಜಿಲ್ಲೆಯ ಜನರ ಬೇಡಿಕೆಗಳು ಈಡೇರಿಸುವ ತನಕ ನಿರಂತರವಾಗಿ ರೈತ ಸಂಘದಿAದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್