
ವಿಜಯಪುರ, 06 ಮಾರ್ಚ್ (ಹಿ.ಸ.)
ಆ್ಯಂಕರ್ : 4.48 ಲಕ್ಷ ಕೋಟಿ ಬಜೆಟ್ನಲ್ಲಿ ವಿಜಯಪುರ ಜಿಲ್ಲೆ ಬಬಲೇಶ್ವರಕ್ಕೆ ಕೇವಲ 'ತಾತ್ವಿಕ' ಮಂಕುಬೂದಿ ಎರಚಿದ್ದು, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಜನತೆ ಜಿಲ್ಲೆಯ ಸಚಿವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಬಲೇಶ್ವರದ ಬಿಜೆಪಿ ಮುಖಂಡ ಸಂಗಮೇಶ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ 4.48 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಜನತೆಗೆ ಕೇವಲ ಕಾಗದದ ಮೇಲಿನ ಭರವಸೆಗಳನ್ನು ನೀಡಿ ವಂಚಿಸಲಾಗಿದೆ.
ರಾಜ್ಯದ ಪ್ರಭಾವಿ ಸಚಿವರಾಗಿರುವ ಎಂ.ಬಿ.ಪಾಟೀಲರು ತಮ್ಮ ಸ್ವಕ್ಷೇತ್ರಕ್ಕೆ ವಾಸ್ತವಿಕ ಅನುದಾನ ತರುವಲ್ಲಿ ಮತ್ತು ಆಡಳಿತಾತ್ಮಕ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸಿದೆ.
ಬಜೆಟ್ ದಾಖಲೆ ಹೇಳುವ ಸತ್ಯ ಮತ್ತು ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಅನುದಾನವಿಲ್ಲದ ಬರೀ 'ತಾತ್ವಿಕ' ಅನುಮೋದನೆಗಷ್ಟೇ ಸಿಮಿತವಾಗಿದೆ ಎಂದು ಸಂಹಮೇಶ ಬೇಸರ ವ್ಯಕ್ತಪಡಿಸಿದರು. ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ಕೇವಲ 'ತಾತ್ವಿಕ ಅನುಮೋದನೆ' ನೀಡಲಾಗಿದೆ. ಯೋಜನೆಗೆ ಬಿಡಿಗಾಸೂ ಮೀಸಲಿಡದೆ ಕೇವಲ ತಾತ್ವಿಕ ಒಪ್ಪಿಗೆ ನೀಡಿರುವುದು ಬಬಲೇಶ್ವರದ ರೈತರ ಕಣ್ಣಿಗೆ ಮಂಕುಬೂದಿ ಎರಚುವ ತಂತ್ರವಾಗಿದೆ.
ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಜ್ವಲಂತ ಸಮಸ್ಯೆಗಳು ಹಾಗೂ ಬೇಡಿಕೆಗಳು:
ಕ್ಷೇತ್ರದ ಜನತೆ ಸಣ್ಣಪುಟ್ಟ ಕೆಲಸಗಳಿಗೂ ಜಿಲ್ಲಾ ಕೇಂದ್ರಕ್ಕೆ ಅಲೆಯುವಂತಾಗಿದ್ದು, ಬಜೆಟ್ನಲ್ಲಿ ಈ ಕೆಳಗಿನ ತುರ್ತು ಅಗತ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ:
1. *ತಾಲೂಕು ಆಡಳಿತ:* ಬಬಲೇಶ್ವರ ಹಾಗೂ ತಿಕೋಟಾದಲ್ಲಿ ತಾಲೂಕು ಮಟ್ಟದ ಎಲ್ಲಾ ಆಡಳಿತ ಇಲಾಖೆಗಳನ್ನು ಕೂಡಲೇ ಪ್ರಾರಂಭಿಸಬೇಕು.
2. *ಕೋಲ್ಡ್ ಸ್ಟೋರೇಜ್:* ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ಬಬಲೇಶ್ವರದಲ್ಲಿ ಸರ್ಕಾರಿ ಸ್ವಾಮ್ಯದ ಶೀತಲ ಗೃಹ ನಿರ್ಮಾಣ ಮಾಡಬೇಕು.
3. *ನೋಂದಣಿ ಕಚೇರಿ:* ಬಬಲೇಶ್ವರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಕೂಡಲೇ ಪೂರ್ಣ ಪ್ರಮಾಣದಲ್ಲಿ
---------------
ಹಿಂದೂಸ್ತಾನ್ ಸಮಾಚಾರ್ / jyothi deshpande