ಪ್ರಬಂಧ ಸ್ಪರ್ಧೆ
ವಿಜಯಪುರ, 05 ಮಾರ್ಚ್ (ಹಿ.ಸ.) ಆ್ಯಂಕರ್ : ಮೇರಾ ಯುವ ಭಾರತ (ಮೈ ಭಾರತ) ವಿಜಯಪುರ, ಗಡಿನಾಡ ಯುವ ಸಮಾಜ ಹಾಗೂ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಘ ರೇವತಗಾಂವ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿವಸ — ೨೦೨೬ ರ ನಿಮಿತ್ಯ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾಲಹಳ್ಳಿ ಗ್ರಾಮದ ಅಲ್ಪ ಸಂಖ್ಯಾತರ ಮ
Prabhand sparde


ವಿಜಯಪುರ, 05 ಮಾರ್ಚ್ (ಹಿ.ಸ.)

ಆ್ಯಂಕರ್ : ಮೇರಾ ಯುವ ಭಾರತ (ಮೈ ಭಾರತ) ವಿಜಯಪುರ, ಗಡಿನಾಡ ಯುವ ಸಮಾಜ ಹಾಗೂ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಘ ರೇವತಗಾಂವ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿವಸ — ೨೦೨೬ ರ ನಿಮಿತ್ಯ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾಲಹಳ್ಳಿ ಗ್ರಾಮದ ಅಲ್ಪ ಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ೨೫ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜಗೌಡ ಪಾಟೀಲ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರವಿಕೆಂಗಾರ, ಶಂಕರ ಇಂಗಳೆ, ಪ್ರಿನ್ಸಿಪಾಲ ರವಿಚಂದ್ರ ಕಾಂಬಳೆ, ಗಿಬ್ಬಳ್ಳಿ ಮೋಹನಕುಮಾರ, ಗಿರೀಶ ನಿವರಗಿ, ಬನಸೋಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande