
ಕೋಲಾರ, ೦೪ ಮಾರ್ಚ್ (ಹಿ.ಸ)
ಆಂಕರ್ : ನಗರದ ಹೊರವಲಯದ ಟಮಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಡಾಬಾ ಶಂಕರ್ ನೇತೃತ್ವದಲ್ಲಿ ನೂತನ ಅಧ್ಯಕ್ಷರಾಗಿ ರಮೇಶ್ ಮತ್ತು ಉಪಾಧ್ಯಕ್ಷರಾಗಿ ವೆಂಕಟರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವಿರೋಧ ಆಯ್ಕೆ ಸುಗಮವಾಯಿತು. ಚುನಾವಣಾಧಿಕಾರಿ ವೆಂಕಟೇಶ್ ಬಾಬು ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು, ಆಡಳಿತ ಮಂಡಳಿಯ ೧೦ ನಿರ್ದೆಶಕರ ಸ್ಥಾನಕ್ಕೆ ಫೆ. ೧೪ರಂದು ಚುನಾವಣೆ ನಡೆದಿತ್ತು ಆಯ್ಕೆಯ ನಂತರ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮತ್ತು ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಅವರನ್ನು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ.ಕೃಷ್ಣಪ್ಪ, ಕೆ.ಶಿವಣ್ಣ, ಎ.ವೆಂಕಟೇಶ್, ಲಕ್ಷ್ಮೀದೇವಮ್ಮ, ಭಾಗ್ಯಮ್ಮ, ವೆಂಕಟೇಶಪ್ಪ, ಜೆಡಿಎಸ್ ಯುವ ಮುಖಂಡ ಡಾಬಾ ಶಂಕರ್, ಶ್ರೀರಾಮ್, ಹರೀಷ್, ನಾರಾಯಣಪ್ಪ, ಪ್ರಕಾಶ್, ಮಂಜುನಾಥ್, ಕಿಚ್ಚಚಂದ್ರು, ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್