
ಕೋಲಾರ ೪ ಮಾರ್ಚ್ (ಹಿ.ಸ)
ಆಂಕರ್ : ನಗರದ ನಿವಾಸಿಗಳಿಗೆ ಪ್ರಮುಖ ಸೂಚನೆಯೊಂದನ್ನು ನೀಡಲಾಗಿದ್ದು, ದಿನಾಂಕ ಮಾರ್ಚ್ ೦೫, ೨೦೨೬ ರಿಂದ ಮಾರ್ಚ್ ೦೮, ೨೦೨೬ರವರೆಗೆ ನಗರದಲ್ಲಿ ಯರಗೋಳ್ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಕೋಲಾರ ನಗರಸಭೆ ತಿಳಿಸಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬೇತಮಂಗಲ ಉಪ ವಿಭಾಗ) ಹಾಗೂ ನಗರಸಭೆಯ ವತಿಯಿಂದ ಕೋಲಾರ ನಗರದಲ್ಲಿರುವ ೩೦.೪೨ ಎಂ.ಎಲ್.ಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕದಲ್ಲಿನ ನೀರು ಶೇಖರಣಾ ತೊಟ್ಟಿಗಳ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಯರಗೋಳ್ ಅಣೆಕಟ್ಟೆಯಿಂದ ನಗರಕ್ಕೆ ಪೂರೈಕೆಯಾಗುವ ನೀರನ್ನು ನಿಲ್ಲಿಸಲಾಗುತ್ತಿದೆ.
ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈ ನಿರ್ವಹಣಾ ಕಾರ್ಯ ಅತ್ಯಗತ್ಯವಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು. ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಸಬೇಕೆಂದು ಕೋರಲಾಗಿದೆ.
ಜಲಶುದ್ಧೀಕರಣ ಘಟಕದ ಸ್ವಚ್ಛತಾ ಕಾರ್ಯ ಚಾಲನೆಯಲ್ಲಿರುವುದರಿಂದ ದಿನಾಂಕ ೦೫.೦೩.೨೦೨೬ ರಿಂದ ೦೮.೦೩.೨೦೨೬ (೪ ದಿನಗಳು) ವರೆಗೆ ಕೋಲಾರ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಯಾರಗೊಳ್ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಕೋಲಾರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್