ಬಾಗಲಕೋಟೆಯಲ್ಲಿ ಅದ್ಧೂರಿ ಕಾಮ ದಹನ
ವಿಜಯಪುರ, 04 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಬಾಗಲಕೋಟೆ ನಗರದ ವಿವಿಧ ಗಲ್ಲಿಗಲ್ಲಿಗಳಲ್ಲಿ ಕಾಮದಹನ ನಡೆಸಲಾಯಿತು. ಕಾಮ ದಹನ ಮಾಡಲು ಬೆಂಕಿ ತರಲು ಹರಿಜನಕೇರಿಗೆ ಹೋದ ಜನರು ಬೆಂಕಿ ತರಲು ಹೋಗುವವರಿಗೆ ಕುಳ್ಳು(ಬೆರಣಿ)ಎಸೆದು ವಿರೋಧಿಸುವ ಪದ್ದತ
ಬಾಗಲಕೋಟೆಯಲ್ಲಿ ಅದ್ಧೂರಿ ಕಾಮ ದಹನ


ವಿಜಯಪುರ, 04 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಬಾಗಲಕೋಟೆ ನಗರದ ವಿವಿಧ ಗಲ್ಲಿಗಲ್ಲಿಗಳಲ್ಲಿ ಕಾಮದಹನ ನಡೆಸಲಾಯಿತು.

ಕಾಮ ದಹನ ಮಾಡಲು ಬೆಂಕಿ ತರಲು ಹರಿಜನಕೇರಿಗೆ ಹೋದ ಜನರು

ಬೆಂಕಿ ತರಲು ಹೋಗುವವರಿಗೆ ಕುಳ್ಳು(ಬೆರಣಿ)ಎಸೆದು ವಿರೋಧಿಸುವ ಪದ್ದತಿ ಮೂಲಕ

ಕುಳ್ಳು ಎಸೆದು ಹರಿಜನಕೇರಿ ಜನರ ವಿರೋಧ ವ್ಯಕ್ತಪಡಿಸಿದರ.

ವಿರೋಧವನ್ನು ಎದುರಿಸಿ ಬೆಂಕಿ ತಂದು ಕಾಮದಹನ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

ಮೊದಲು ಬಾಗಲಕೋಟೆಯ ಹಳೆಪೇಟೆ ಗಜಾನನ ಚೌಕ್ನಲ್ಲಿ ಕಾಮದಹನ ಆದರೆ ಬಳಿಕ ಪೂಜೆ ಪುನಸ್ಕಾರ ಮಾಡಿ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ ಕಾಮದಹನ ನಡೆಸಲಾಗುತ್ತದೆ.

ಆ ಬಳಿಕವೇ ನಗರದ ಬಹುತೇಕ ಕಡೆಗಳಲ್ಲಿ ಪ್ರತಿಷ್ಠಾಪನೆಯಾಗಿದ್ದ ಗಲ್ಲಿ ಗಲ್ಲಿಗಳಲ್ಲಿ ಕಾಮದಹನ ನಡೆಸಲಾಗುತ್ತದೆ.

ಏತನ್ಮದ್ಯೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಿವಾದಿತ ಪಂಕಾ ಮಸೀದಿ ಸೇರಿದಂತೆ ನಗರದ ಬಹುತೇಕ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande