ಗಂಗಾವತಿ : ಕ್ರಿಕೆಟ್ ಆಟಗಾರರ ಆಯ್ಕೆ : ಏಪ್ರೇಲ್ 3 ರಿಂದ
ಗಂಗಾವತಿ, 30 ಮಾರ್ಚ್ (ಹಿ.ಸ.) ಆ್ಯಂಕರ್ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ಅಂತರ ಜಿಲ್ಲೆ ಕ್ರಿಕೆಟ್ ಪಂದಾವಳಿಗೆ 14, 16 ಮತ್ತು 19 ವರ್ಷದ ಒಳಗಿನ ತಂಡಗಳ ಆಟಗಾರರ ಮುಕ್ತ ಆಯ್ಕೆ ಪ್ರಕ್ರಿಯೆ ಏಪ್ರೇಲ್ 3, 4 ಹಾಗು 5 ರಂದು ಬೆಳಗ್ಗೆ 8 ಗಂಟೆಗೆ ಗಂಗಾವತಿಯ ಶ್ರೀ ಚನ್ನಬಸವಸ್ವಾಮಿ
ಗಂಗಾವತಿ : ಕ್ರಿಕೆಟ್ ಆಟಗಾರರ ಆಯ್ಕೆ : ಏಪ್ರೇಲ್ 3 ರಿಂದ


ಗಂಗಾವತಿ, 30 ಮಾರ್ಚ್ (ಹಿ.ಸ.)

ಆ್ಯಂಕರ್ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ಅಂತರ ಜಿಲ್ಲೆ ಕ್ರಿಕೆಟ್ ಪಂದಾವಳಿಗೆ 14, 16 ಮತ್ತು 19 ವರ್ಷದ ಒಳಗಿನ ತಂಡಗಳ ಆಟಗಾರರ ಮುಕ್ತ ಆಯ್ಕೆ ಪ್ರಕ್ರಿಯೆ ಏಪ್ರೇಲ್ 3, 4 ಹಾಗು 5 ರಂದು ಬೆಳಗ್ಗೆ 8 ಗಂಟೆಗೆ ಗಂಗಾವತಿಯ ಶ್ರೀ ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಜರುಗಲಿದೆ ಎಂದು ಸಂಚಾಲಕರಾದ ಕುಶಾಲ್ ಪಾಟೀಲ್ ಗಾದಗಿ ತಿಳಿಸಿದ್ದಾರೆ.

14 ವರ್ಷದ ಒಳಗಿನ ಕ್ರಿಕೆಟ್ ಆಟಗಾರರ ಆಯ್ಕೆ ಏಪ್ರೇಲ್ 03ಕ್ಕೆ, 16 ವರ್ಷದ ಒಳಗಿನ ಆಟಗಾರರ ಆಯ್ಕೆ ಏಪ್ರೇಲ್ 04ಕ್ಕೆ, 19 ವರ್ಷದ ಒಳಗಿನ ಆಟಗಾರರ ಆಯ್ಕೆ ಏಪ್ರೇಲ್ 05 ರಂದು ನಡೆಯಲಿದೆ. 2012 ರ ಸೆಪ್ಟಂಬರ್ 1 ಅಥವಾ ನಂತರ ಜನಿಸಿದವರು 14 ವರ್ಷದೊಳಗಿನ ತಂಡಕ್ಕೆ, 2010 ಸೆಪ್ಟಂಬರ್ 1 ಅಥವಾ ನಂತರ ಜನಿಸಿದವರು 16 ವರ್ಷದೊಳಗಿನ ತಂಡಕ್ಕೆ ಹಾಗು 2007 ಸೆಪ್ಟಂಬರ್ 1 ಅಥವಾ ನಂತರ ಜನಿಸಿದವರು 19 ವರ್ಷದೊಳಗಿನ ತಂಡಗಳಿಗಾಗಿ ಜರುಗುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.

ಆಸಕ್ತರು ಜನುಮದಿನಾಂಕದ ದಾಖಲೆ, ಅಂಕಪಟ್ಟಿ ಹಾಗು ಆಧಾರ್ ಕಾಡ್ ಜಿರಾಕ್ಸ್ ಪ್ರತಿಯೊಂದಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ನೊಂದಣಿ ಹಾಗು ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕರು ರಾಜೇಶ್ ಪಲ್ಲಕ್ಕಿ (ಕೊಪ್ಪಳ – 9886399200) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande