ಭರತ್ ಕಂದಕೂರಗೆ ಪ್ರಶಸ್ತಿ
ಕೊಪ್ಪಳ, 30 ಮಾರ್ಚ್ (ಹಿ.ಸ.) ಆ್ಯಂಕರ್ : ಬೆಂಗಳೂರು ಫೋಟೋಗ್ರಾಫಿಕ್ ಕ್ಲಬ್ ಆಯೋಜಿಸಿದ್ದ ''ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಭರತ್ ಕಂದಕೂರ ಅವರಿಗೆ ಬಹುಮಾನ ಲಭಿಸಿದೆ. ದೊಡ್ಡಬಳ್ಳಾಪುರದ ಸುಧೀರ್ ಭಜನೆ ಹಟ್ಟಿ ಅವರ ಕೊಪ್ಪಳದ ಗವಿಸಿದ್ದ
ಭರತ್ ಕಂದಕೂರಗೆ ಪ್ರಶಸ್ತಿ


ಭರತ್ ಕಂದಕೂರಗೆ ಪ್ರಶಸ್ತಿ


ಕೊಪ್ಪಳ, 30 ಮಾರ್ಚ್ (ಹಿ.ಸ.)

ಆ್ಯಂಕರ್ : ಬೆಂಗಳೂರು ಫೋಟೋಗ್ರಾಫಿಕ್ ಕ್ಲಬ್ ಆಯೋಜಿಸಿದ್ದ 'ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಭರತ್ ಕಂದಕೂರ ಅವರಿಗೆ ಬಹುಮಾನ ಲಭಿಸಿದೆ.

ದೊಡ್ಡಬಳ್ಳಾಪುರದ ಸುಧೀರ್ ಭಜನೆ ಹಟ್ಟಿ ಅವರ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಚಿತ್ರ (ಪ್ರಥಮ ಸ್ಥಾನ), ದೊಡ್ಡಬಳ್ಳಾಪುರದ ಬಿ.ಎನ್.ಉಮಾಶಂಕರ್ ಅವರ ಗೋಕಾಕದ ಭಂಡಾರ ಜಾತ್ರೆ ಚಿತ್ರ (ದ್ವಿತೀಯ ಸ್ಥಾನ), ‘ಪ್ರಜಾವಾಣಿ’ಯ ಕೊಪ್ಪಳ ಛಾಯಾಗ್ರಾಹಕ ಭರತ್ ಕಂದಕೂರ ಅವರ ಅಂಜನಾದ್ರಿ ಬೆಟ್ಟದ ಹನುಮ ಮಾಲೆ ಚಿತ್ರ (ತೃತೀಯ ಸ್ಥಾನ) ಪಡೆದಿವೆ.

ಮುಂದಿನ ವರ್ಷದ ಛಾಯಾಚಿತ್ರ ಸ್ಪರ್ಧೆಗೆ 'ಕನಾಟಕದ ಹಬ್ಬ ಮತ್ತು ಆಚರಣೆಗಳು' ಎನ್ನುವ ವಿಷಯ ಆಯ್ಕೆ ಮಾಡಲಾಗಿದ್ದು, ಛಾಯಾಗ್ರಾಹಕರು ಭಾಗಿಯಾಗಬಹುದು ಎಂದು ಕ್ಲಬ್ ಅಧ್ಯಕ್ಷ ಟಿ.ಕೆಂಪಣ್ಣ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಪುರಸ್ಕಾರ ಒಳಗೊಂಡಿದ್ದು ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande