ಪಕ್ಷ ನಿಷ್ಠೆ ಹೊಂದಿದ್ದ ಎಚ್.ವೈ. ಮೇಟಿ: ಸಿದ್ದರಾಮಯ್ಯ
ಬಾಗಲಕೋಟೆ, 30 ಮಾರ್ಚ್ (ಹಿ.ಸ.): ಆ್ಯಂಕರ್: ನನ್ನ ಆತ್ಮೀಯರೂ-ಪಕ್ಷ ನಿಷ್ಠೆ ಇದ್ದವರಾಗಿದ್ದ ಎಚ್.ವೈ. ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಗೆಲ್ಲಬೇಕು. ನಾನೇ ಚುನಾವಣೆಗೆ ನಿಂತಿದ್ದೀನಿ ಅಂದುಕೊಂಡು ಮತ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಬಾಗಲಕೋಟೆ
Cm


ಬಾಗಲಕೋಟೆ, 30 ಮಾರ್ಚ್ (ಹಿ.ಸ.):

ಆ್ಯಂಕರ್:

ನನ್ನ ಆತ್ಮೀಯರೂ-ಪಕ್ಷ ನಿಷ್ಠೆ ಇದ್ದವರಾಗಿದ್ದ ಎಚ್.ವೈ. ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಗೆಲ್ಲಬೇಕು.

ನಾನೇ ಚುನಾವಣೆಗೆ ನಿಂತಿದ್ದೀನಿ ಅಂದುಕೊಂಡು ಮತ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಪರವಾಗಿ ರಾಂಪುರ ಮತ್ತು ಬೇವೂರ ಗ್ರಾಮದಲ್ಲಿ‌ ಮತಯಾಚಿಸಿದರು.‌

ನುಡಿದಂತೆ ನಡೆದು ಕೆಲಸ ಮಾಡುತ್ತಿರುವ ನಮ್ಮ ಸರ್ಕಾರದ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆದರೆ, ಬಿಜೆಪಿ ಸರ್ಕರ ತನ್ನ ಅವಧಿಯಲ್ಲಿ ಬಾಕಿ ಉಳಿಸಿದ್ದ 30 ಸಾವಿರ ಕೋಟಿಯಲ್ಲಿ ನಮ್ಮ ಸರ್ಕಾರ 24 ಸಾವಿರ ಕೋಟಿ ರೂಪಾಯಿ ಬಾಕಿ ತೀರಿಸಿದೆ. ಹಣ ಇಲ್ಲದಿದ್ದರೂ ಬಿಜೆಪಿಯವರು ಗುತ್ತಿಗೆ ನೀಡಿ ಹೋದರು ಎಂದರು.

ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ಗೆ ಎತ್ತರಿಸುವ ಹಾಗೂ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡದ ಬಿಜೆಪಿ ಏನೂ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಚರಂತಿಮಠ್ ಅವರನ್ನು ನೋಡುವುದೇ ಕಷ್ಟ, ಮನೆಗೆ ಯಾರನ್ನೂ ಸೇರಿಸದ ಚರಂತಿಮಠ್ ಅವರು ಶಾಸಕರಾಗಲು ಲಾಯಕ್ಕಾ ಎನ್ನುವುದನ್ನು ಯೋಚಿಸಿ. ಮೇಟಿ ಅವರು ಅತ್ಯಂತ ಸರಳ ಮತ್ತು ಜನಪರ ವ್ಯಕ್ತಿ ಆಗಿದ್ದರು. ಇವರ ಮಗ ಉಮೇಶ್ ಮೇಟಿ ಅವರನ್ನು ಗೆಲ್ಲಿಸಿದರೆ ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

ಎಲ್ಲರ ಹಿತ ಮತ್ತು ಸರ್ವ ಜನಾಂಗದ ಏಳಿಗೆಯನ್ನು ಬಯಸುವ ಪಕ್ಷ ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಕೃಷ್ಣ ಮೇಲ್ದಂಡೆ ಮಾಡಲಿಲ್ಲ. 13 ವರ್ಷದಿಂದ ಈ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಮಾಡಲಿಲ್ಲ. ಕೇಂದ್ರದಲ್ಲಿ ಇರುವುದು ಚರಂತಿಮಠ್ ಅವರ ಪಕ್ಷ. ನಾವು ಹಲವು ಬಾರಿ ಪ್ರಧಾನಿ ಮತ್ತು ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದರೂ ನಮ್ಮ ಮನವಿಯನ್ನು ಈಡೇರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇವತ್ತು ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬರುತ್ತಿರುವುದಕ್ಕೆ ಮೇಟಿಯವರ ಶ್ರಮ ಕಾರಣ ಎಂದರು.

ಹೀಗಾಗಿ ಉಮೇಶ್ ಮೇಟಿಯವರನ್ನೂ ಗೆಲ್ಲಿಸಿ ಕಳಿಸಿದರೆ ನನ್ನ ಕೈ ಬಲಪಡಿಸಿದಂತಾಗುತ್ತದೆ ಎಂದು ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande