ಬಸವಣ್ಣ ಜಯಂತೋತ್ಸವ ಕರಪತ್ರ ಬಿಡುಗಡೆ
ಭಾಲ್ಕಿ, 30 ಮಾರ್ಚ್ (ಹಿ.ಸ.): ಆ್ಯಂಕರ್:ಏಪ್ರಿಲ್ 20, 21 ಮತ್ತು 22ರಂದು ಭಾಲ್ಕಿ ನಗರದಲ್ಲಿ ವಿಜೃಂಭಣೆಯಿಂದ ನಡೆಯಲಿರುವ ವಿಶ್ವಗುರು ಬಸವಣ್ಣನವರ ಜಯಂತೋತ್ಸವ, ಪೂಜ್ಯ ಲಿಂ. ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಅಂಗವಾಗಿ ಕರಪತ್ರವನ್ನು ಸ
Release


ಭಾಲ್ಕಿ, 30 ಮಾರ್ಚ್ (ಹಿ.ಸ.):

ಆ್ಯಂಕರ್:ಏಪ್ರಿಲ್ 20, 21 ಮತ್ತು 22ರಂದು ಭಾಲ್ಕಿ ನಗರದಲ್ಲಿ ವಿಜೃಂಭಣೆಯಿಂದ ನಡೆಯಲಿರುವ ವಿಶ್ವಗುರು ಬಸವಣ್ಣನವರ ಜಯಂತೋತ್ಸವ, ಪೂಜ್ಯ ಲಿಂ. ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಅಂಗವಾಗಿ ಕರಪತ್ರವನ್ನು ಸಚಿವ ಈಶ್ವರ ಖಂಡ್ರೆ ಹಿರೇಮಠದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದ ಈಶ್ವರ ಖಂಡ್ರೆ, ಬಸವ ತತ್ವಗಳ ಪ್ರಸಾರ ಹಾಗೂ ಸಮಾಜದಲ್ಲಿ ಸಮಾನತೆ ಸಂದೇಶವನ್ನು ಹರಡುವ ಉದ್ದೇಶದಿಂದ ಈ ಉತ್ಸವವನ್ನು ಭವ್ಯವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande