ನವರಾತ್ರಿಯಲ್ಲಿ ವೈಷ್ಣೋದೇವಿಗೆ ಭಕ್ತರ ಮಹಾಪ್ರವಾಹ
ಜಮ್ಮು, 26 ಮಾರ್ಚ್ (ಹಿ.ಸ.): ಆ್ಯಂಕರ್:ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕೆ 26 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಮಾರ್ಚ್ 19ರಿಂದ 25ರವರೆಗೆ ಲಕ್ಷಾಂತರ ಯಾತ್ರಿಕರು ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದು, ಯಾತ್ರೆ ಸು
ನವರಾತ್ರಿಯಲ್ಲಿ ವೈಷ್ಣೋದೇವಿಗೆ ಭಕ್ತರ ಮಹಾಪ್ರವಾಹ


ಜಮ್ಮು, 26 ಮಾರ್ಚ್ (ಹಿ.ಸ.):

ಆ್ಯಂಕರ್:ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕೆ 26 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

ಮಾರ್ಚ್ 19ರಿಂದ 25ರವರೆಗೆ ಲಕ್ಷಾಂತರ ಯಾತ್ರಿಕರು ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದು, ಯಾತ್ರೆ ಸುಗಮವಾಗಿ ನಡೆಯುತ್ತಿದೆ. ಭಾರಿ ಜನಸಂದಣಿ ಹಿನ್ನೆಲೆ ಯಾತ್ರಿಕರ ನೋಂದಣಿಯನ್ನು ತಾತ್ಕಾಲಿಕವಾಗಿ ಎರಡು ಬಾರಿ ಸ್ಥಗಿತಗೊಳಿಸಲಾಯಿತು.

ಭದ್ರತೆ ದೃಷ್ಟಿಯಿಂದ ಪೊಲೀಸ್, ಸಿಆರ್‌ಪಿಎಫ್ ಸೇರಿದಂತೆ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದ್ದು, 13 ಕಿಮೀ ಯಾತ್ರಾ ಮಾರ್ಗದಲ್ಲಿ ಸ್ವಯಂಸೇವಕರು ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯ ಪ್ರದೇಶವನ್ನು ದೀಪಾಲಂಕಾರ ಹಾಗೂ ಹೂವಿನ ಅಲಂಕಾರಗಳಿಂದ ಸಿಂಗಾರ ಮಾಡಲಾಗಿದ್ದು, ಭಕ್ತರು ‘ಜೈ ಮಾತಾ ದಿ’ ಘೋಷಣೆಗಳೊಂದಿಗೆ ದರ್ಶನ ಪಡೆಯುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande