ಅಯೋಧ್ಯೆ ರಾಮ ಮಂದಿರಕ್ಕೆ ದಿಗ್ವಿಜಯ್ ಸಿಂಗ್ ಭೇಟಿ
ಅಯೋಧ್ಯೆ, 26 ಮಾರ್ಚ್ (ಹಿ.ಸ.): ಆ್ಯಂಕರ್:ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ರಾಮನವಮಿಯಂದು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಮಲಲ್ಲಾ ದರ್ಶನ ಪಡೆದರು. ದರ್ಶನದ ಬಳಿಕ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದೇವೆಂಬ ಆರೋಪಗಳನ್ನು ತಳ್
ದಿಗ್ವಿಜಯ ಸಿಂಗ್


ಅಯೋಧ್ಯೆ, 26 ಮಾರ್ಚ್ (ಹಿ.ಸ.):

ಆ್ಯಂಕರ್:ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ರಾಮನವಮಿಯಂದು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಮಲಲ್ಲಾ ದರ್ಶನ ಪಡೆದರು.

ದರ್ಶನದ ಬಳಿಕ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದೇವೆಂಬ ಆರೋಪಗಳನ್ನು ತಳ್ಳಿಹಾಕಿ, “ನಾನು ಎಂದಿಗೂ ವಿರೋಧಿಸಿಲ್ಲ” ಎಂದು ಸ್ಪಷ್ಟಪಡಿಸಿದರು. ಮಂದಿರ ನಿರ್ಮಾಣಕ್ಕಾಗಿ ₹1.11 ಲಕ್ಷ ದೇಣಿಗೆ ನೀಡಿರುವುದನ್ನೂ ತಿಳಿಸಿದರು.

ಇದೇ ವೇಳೆ ಹನುಮಾನ್ ಗರ್ಹಿಯಲ್ಲಿಯೂ ಪೂಜೆ ಸಲ್ಲಿಸಿದ ಅವರು, ದೇಶದ ಸಮೃದ್ಧಿ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande