ಪರಂಪರೆಯ ಸುವಾಸನೆ ಹೊತ್ತ ಮೈಸೂರು ಸ್ಯಾಂಡಲ್ ಸೋಪ್-ಸಚಿವಎಂಬಿ ಪಾಟೀಲ್
ವಿಜಯಪುರ, 25 ಮಾರ್ಚ್ (ಹಿ.ಸ.) ಆ್ಯಂಕರ್ : ತಲೆಮಾರುಗಳಿಂದ ಜನರ ವಿಶ್ವಾಸವನ್ನು ಗೆದ್ದಿರುವ ಮೈಸೂರು ಸ್ಯಾಂಡಲ್ ಸೋಪ್ ಇಂದು ಕೂಡ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದರು. ಪಾರಂಪರಿಕ ಸಿದ್ಧತೆಯಿಂದ ಆರಂಭಿಸ
ಸೋಪ


ವಿಜಯಪುರ, 25 ಮಾರ್ಚ್ (ಹಿ.ಸ.)

ಆ್ಯಂಕರ್ : ತಲೆಮಾರುಗಳಿಂದ ಜನರ ವಿಶ್ವಾಸವನ್ನು ಗೆದ್ದಿರುವ ಮೈಸೂರು ಸ್ಯಾಂಡಲ್ ಸೋಪ್ ಇಂದು ಕೂಡ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದರು.

ಪಾರಂಪರಿಕ ಸಿದ್ಧತೆಯಿಂದ ಆರಂಭಿಸಿ ಆಧುನಿಕ ತಂತ್ರಜ್ಞಾನದ ಸಂಸ್ಕರಣೆಯವರೆಗೆ ಪ್ರತಿಯೊಂದು ಸಾಬೂನಿನಲ್ಲೂ ಶುದ್ಧತೆ, ವಿಶ್ವಾಸ ಹಾಗೂ ಕೌಶಲ್ಯದ ಅಪೂರ್ವ ಪರಂಪರೆ ಅಡಗಿದೆ.

ಚಂದನದ ಸುವಾಸನೆ ಮತ್ತು ಉತ್ತಮ ಗುಣಮಟ್ಟದಿಂದ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದ ಅಸ್ಮಿತೆಯ ಹೆಗ್ಗುರುತಾಗಿ ಹಲವು ದಶಕಗಳಿಂದ ಮನೆಮನೆಗಳಲ್ಲೂ ಬಳಕೆಯಲ್ಲಿದೆ.

ಕಾಲಾನುಗುಣವಾಗಿ ತಂತ್ರಜ್ಞಾನದಲ್ಲಿ ಬದಲಾವಣೆಗಳಾಗಿದ್ದರೂ, ಇದರ ಗುಣಮಟ್ಟ ಮತ್ತು ಪರಂಪರೆ ಅದೆಷ್ಟೋ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ.

ರಾಜ್ಯದ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ತಯಾರಿಸುವುದು ಕರ್ನಾಟಕ ಸೋಪ ಹಾಗೂ ಡಿಟರ್ಜೆಂಟ್ ಸಂಸ್ಥೆ. ಕರ್ನಾಟಕದ ಚಂದನ ಸಂಪತ್ತನ್ನು ಬಳಸಿಕೊಂಡು ತಯಾರಾಗುವ ಈ ಸಾಬೂನು ದೇಶದಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನದೇ ಆದ ಖ್ಯಾತಿ ಪಡೆದಿದೆ.

ರಾಜ್ಯದ ಬ್ರ್ಯಾಂಡ್ ಆಗಿರುವ ಮೈಸೂರು ಸ್ಯಂಡಲ್ಸೋಪ್ ಹಲವು ತಲೆಮಾರುಗಳಿಂದ ಜನರ ನೆನಪುಗಳಲ್ಲಿ ಉಳಿದುಕೊಂಡಿರುವ ವಿಶಿಷ್ಟ ಉತ್ಪನ್ನವಾಗಿದೆ. ರಾಜ್ಯದ ಹೆಮ್ಮೆಯ ಸಂಕೇತವಾಗಿರುವ ಈ ಸಾಬೂನು ಮುಂದುವರೆದೂ ಕರ್ನಾಟಕದ ಗೌರವವನ್ನು ವಿಶ್ವ ಮಟ್ಟದಲ್ಲಿ ಪ್ರತಿಬಿಂಬಿಸುತ್ತಿದೆ ಎಂದು ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande