ಹೈ-ಬೀಮ್ ಬಳಕೆಯಿಂದ ಹೆಚ್ಚುತ್ತಿರುವ ಅಪಘಾತದ: ಪೊಲೀಸ್ ಇಲಾಖೆಯಿಂದ ಜಾಗೃತಿ ಕರೆ
ಬಾಗಲಕೋಟೆ, 25 ಮಾರ್ಚ್ (ಹಿ.ಸ.) ಆ್ಯಂಕರ್ : ರಾತ್ರಿ ವೇಳೆ ವಾಹನ ಚಾಲನೆ ಮಾಡುವಾಗ ಹೈ-ಬೀಮ್ ಬೆಳಕಿನ ಅತಿಯಾದ ಬಳಕೆ ಎದುರಿನಿಂದ ಬರುವ ವಾಹನ ಚಾಲಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದು ಹೈ ಭೀಮ್ ಲೈಟ್ ನಿಷೇಧಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ. ಹೈ-ಬೀಮ
ಹೈ ಭೀಮ್


ಬಾಗಲಕೋಟೆ, 25 ಮಾರ್ಚ್ (ಹಿ.ಸ.)

ಆ್ಯಂಕರ್ : ರಾತ್ರಿ ವೇಳೆ ವಾಹನ ಚಾಲನೆ ಮಾಡುವಾಗ ಹೈ-ಬೀಮ್ ಬೆಳಕಿನ ಅತಿಯಾದ ಬಳಕೆ ಎದುರಿನಿಂದ ಬರುವ ವಾಹನ ಚಾಲಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದು ಹೈ ಭೀಮ್ ಲೈಟ್ ನಿಷೇಧಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.

ಹೈ-ಬೀಮ್ ಬೆಳಕಿನಿಂದ ಎದುರಿನ ಚಾಲಕರಿಗೆ ಕಣ್ಣು ಮಿಂಚುವುದು, ಗಮನ ತಪ್ಪುವುದು ಮುಂತಾದ ಸಮಸ್ಯೆಗಳು ಉಂಟಾಗಿ ಅಪಘಾತಗಳ ಸಂಭವ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ರಾತ್ರಿ ವಾಹನ ಚಲಾಯಿಸುವಾಗ ಅನಗತ್ಯವಾಗಿ ಹೈ-ಬೀಮ್ ಬಳಕೆ ಮಾಡಬಾರದು ಎಂದು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

ಎದುರಿನಿಂದ ವಾಹನ ಬಂದಾಗ ಡಿಪ್ಪರ್ ಅಥವಾ ಲೋ-ಬೀಮ್ ಬಳಸಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು. ಇದರಿಂದ ನಿಮ್ಮ ಹಾಗೂ ಇತರರ ಜೀವವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande