ಕೆಎಂಎಫ್–ಆರ್ಸಿಬಿ ಒಪ್ಪಂದ: ಐಪಿಎಲ್ 2026ಕ್ಕೆ ‘ನಂದಿನಿ’ ಅಧಿಕೃತ ಡೈರಿ ಪಾಲುದಾರ
ಬೆಂಗಳೂರು, 24 ಮಾರ್ಚ್ (ಹಿ.ಸ.): ಆ್ಯಂಕರ್: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಐಪಿಎಲ್–2026 ಸೀಸನ್‌ಗೆ ಸಂಬಂಧಿಸಿದಂತೆ ‘ನಂದಿನಿ’ ಬ್ರ್ಯಾಂಡ್‌ನ್ನು ಅಧಿಕೃತ ಡೈರಿ ಪಾಲುದಾರರನ್ನಾಗಿ ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮಾರ್ಚ್ 2
Kmf rcb


ಬೆಂಗಳೂರು, 24 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಐಪಿಎಲ್–2026 ಸೀಸನ್‌ಗೆ ಸಂಬಂಧಿಸಿದಂತೆ ‘ನಂದಿನಿ’ ಬ್ರ್ಯಾಂಡ್‌ನ್ನು ಅಧಿಕೃತ ಡೈರಿ ಪಾಲುದಾರರನ್ನಾಗಿ ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್–2026 ಟಿ–20 ಟೂರ್ನಿಗೆ ಮುನ್ನ ಈ ಮಹತ್ವದ ಒಪ್ಪಂದ ಕೈಗೊಳ್ಳಲಾಗಿದ್ದು, ರಾಜ್ಯದ ಪ್ರಸಿದ್ಧ ‘ನಂದಿನಿ’ ಬ್ರ್ಯಾಂಡ್ ಇದೀಗ ಆರ್‌ಸಿಬಿಯೊಂದಿಗೆ ಕೈಜೋಡಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ.

ಈ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು, ಆರ್‌ಸಿಬಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪ್ರತಿನಿಧಿಗಳು ಸಭೆ ನಡೆಸಿ ಅಂತಿಮ ರೂಪ ನೀಡಿದ್ದಾರೆ. ‘ನಂದಿನಿ’ ಉತ್ಪನ್ನಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ದೇಶದಾದ್ಯಂತ ಜನರಿಗೆ ತಲುಪಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್‌ಸಿಬಿ ಪರವಾಗಿ, ತಂಡದ ಬ್ರ್ಯಾಂಡ್ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಬೆಳೆಸಲು ಈ ಸಹಭಾಗಿತ್ವ ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಕೆಎಂಎಫ್ ಪರವಾಗಿ, ರೈತರ ಹಿತಾಸಕ್ತಿ ಹಾಗೂ ರಾಜ್ಯದ ಹಾಲು ಉತ್ಪಾದಕರ ಅಭಿವೃದ್ಧಿಗೆ ಈ ಒಪ್ಪಂದ ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಲಾಗಿದೆ.

ಒಪ್ಪಂದದಡಿ, ಪಂದ್ಯಾವಳಿಯ ವೇಳೆ ಕ್ರೀಡಾಂಗಣಗಳಲ್ಲಿ ‘ನಂದಿನಿ’ ಬ್ರ್ಯಾಂಡ್ ಪ್ರಚಾರ, ಜಾಹೀರಾತು ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಿಗೆ ತಲುಪುವ ಯೋಜನೆ ರೂಪಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande