ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಗಾಂಜಾ ಸಾಗಾಣಿಕೆಯ ಆರೋಪಿಗಳನ್ನು ಬಂಧಿಸಿರುವ ಬಂಗಾರಪೇಟೆ ಪೊಲೀಸರು.


ಕೋಲಾರ, ಮಾರ್ಚ್ ೨೪ (ಹಿ.ಸ):

ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಐದು ಲಕ್ಷ ರೂಪಾಯಿ ಮೌಲ್ಯದ ೧೦ ಕೆ.ಜಿ ೩೨೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಗಾರಪೇಟೆ ಪೊಲೀಸ್ ಠಾಣೆ ಸರಹದ್ದು, ಹುಣಸನಹಳ್ಳಿ ಗ್ರಾಮದಿಂದ ಸೆಲಂ ಗುಡಿಸಲು ಕಡೆ ಹೋಗುವ ತಿರುವಿನ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯನ್ನು ಆಧರಿಸಿ, ಬಂಗಾರಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಕುಮಾರ್.ಸಿ ಮತ್ತು ಸಿಬ್ಬಂದಿಗಳು ಕೂಡಲೆ ದಾಳಿ ನಡೆಸಿದರು. ಒಡಿಸ್ಸಾ ರಾಜ್ಯದ ಗಂಜಮ್ ಜಿಲ್ಲೆಯ ವಾಸಿ ನಬೀನ್ ಕುಮಾರ್ ಬಾರೀಕ್, ೪೨ ವರ್ಷ ಮತ್ತು ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲ್ಲೂಕಿನ ವಾಸಿ ಸಂದೀಪ್, ೩೬ ವರ್ಷ ಎಂಬುವರನ್ನು ಬಂಧಿಸಿ, ಅವರಿಂದ ರೂ.೫,೧೫,೦೦೦/- ಮೌಲ್ಯದ ೧೦ ಕೆ.ಜಿ. ೩೨೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿ.ಐ ರವಿಕುಮಾರ್.ಸಿ, ಪಿ.ಎಸ್.ಐ ಪ್ರಕಾಶ್ ನರಸಿಂಗ್, ಎ.ಎಸ್.ಐ ರಮೇಶ್ ಹಾಗೂ ಸಿಬ್ಬಂದಿಯಾದ ಗೋಪಾಲ್, ಚಲಪತಿ, ಸುನೀಲ್, ಮಹೇಂದ್ರ ಕುಮಾರ್, ಮಂಜುನಾಥ್, ರಾಜೇಶ್ ಬಾಬು, ವಿಶ್ವನಾಥ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡ ಪಾಲ್ಗೊಂಡಿತ್ತು. ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande