ಅರಹಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ
ಅರಹಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ
ಕೋಲಾರ ತಾಲ್ಲೂಕಿನ ಅರಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.


ಕೋಲಾರ,ಮಾ.೨೪(ಹಿ.ಸ)

ಆ್ಯಂಕರ್: ಅರಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಘೋಷಣೆ ಆಗಿದ್ದು ನಗರದ ಅಧಿದೇವತೆ ಕೋಲಾರಮ್ಮನಿಗೆ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮುಖಂಡರಾದ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಮತ್ತು ದಳಪತಿ ಸಿಎಂಆರ್ ಶ್ರೀನಾಥ್ ಪ್ರಚಾರಕ್ಕೆ ಚಾಲನೆ ನೀಡಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ಡಿ.ಎನ್.ಲಕ್ಷ್ಮೀಪತಿ, ಅರಹಳ್ಳಿ ಎಂ.ವೆ0ಕಟೇಶಪ್ಪ, ಕೃಷ್ಣಪ್ಪ, ಹೂಹಳ್ಳಿ ಎಚ್.ಆರ್.ಸಂಪತ್ಕುಮಾರ್, ಕೆ.ವಿ.ಅಶೋಕ್ ಕುಮಾರ್, ನೂರುಲ್ಲಾ, ಎಂ.ಶ್ರೀನಿವಾಸಯ್ಯ, ಎನ್.ಉಮಾದೇವಿ, ನೀಲಮ್ಮ, ಆರ್.ಮಂಜುನಾಥ್, ಬಿ.ಈರಪ್ಪ ಮತ್ತು ಟಿ.ರಾಮಾಂಜನೇಯ ಅವರು ಮೈತ್ರಿಕೂಟದ ಅಭ್ಯರ್ಥಿಗಳಾಗಿದ್ದು ಎಲ್ಲರೂ ಬಹುಮತದಿಂದ ಗೆಲ್ಲಲಿದ್ದಾರೆಂದರು.

ಕಾಂಗ್ರೆಸ್ ದುರಾಡಳಿತದ ವಿರುದ್ಧ ಜನತೆ ತಿರುಗಿ ಬಿದ್ದಿದ್ದು ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯಲ್ಲಿ ಮುಸ್ಲಿಮರು ತಕ್ಕಪಾಠ ಕಲಿಸಲಿದ್ದಾರೆ. ಹೀಗಾಗಿ ಎರಡೂ ಕಡೆ ಮೈತ್ರಿಕೂಟ ಗೆಲ್ಲಲಿದೆ. ಅರಹಳ್ಳಿ ಸೊಟೈಟಿಯಲ್ಲಿ ಮೈತ್ರಿಕೂಟ ಗೆಲ್ಲುವ ಮೂಲಕ ಉತ್ತಮ ಆಡಳಿತ ನೀಡಲಿದೆ ಎಂದು ಸಿಎಂಆರ್ ಶ್ರೀನಾಥ್ ಹೇಳಿದರು.

ಮಾಜಿ ಸಚಿವ ವರ್ತೂರ್ ಪ್ರಕಾಶ್ ಮಾತನಾಡಿ, ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದು ಇದು ಮೈತ್ರಿಕೂಟಕ್ಕೆ ವರದಾನವಾಗಲಿದೆ. ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಮೈತ್ರಿಕೂಟ ಮುಸ್ಲಿಂ ಸಮುದಾಯಕ್ಕೂ ಟಿಕೇಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಪ್ರಕಾಶ್ ನುಡಿದರು.

ಬಿಜೆಪಿ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ನರಸಾಪುರ ಪೆಟ್ರೋಲ್ ಬಂಕ್ ಮಂಜುನಾಥ್, ತಾ.ಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಾಗೂ ಸಾರ್ವಜನಿಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande