ಬಳ್ಳಾರಿ : ಎರಡು ರೈಲುಗಳ ಪ್ರಾರಂಭಕ್ಕೆ ಮನವಿ
ಬಳ್ಳಾರಿ, 17 ಮಾರ್ಚ್ (ಹಿ.ಸ.): ಆ್ಯಂಕರ್: ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳು ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅವರನ್ನು ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಭೇಟಿ ಮಾಡಿ ಕೊಲ್ಲಾಪುರ - ಮುನಗೂರು ಮತ್ತು .ಬಳ್ಳಾರಿ - ಗುಂತಕಲ್ - ಆದೋನಿ - ಹೈದರಾಬಾದ್ ಮ
ಬಳ್ಳಾರಿ : ಎರೆಡು ರೈಲುಗಳ ಪ್ರಾರಂಭಕ್ಕೆ ಮನವಿ


ಬಳ್ಳಾರಿ : ಎರೆಡು ರೈಲುಗಳ ಪ್ರಾರಂಭಕ್ಕೆ ಮನವಿ


ಬಳ್ಳಾರಿ : ಎರೆಡು ರೈಲುಗಳ ಪ್ರಾರಂಭಕ್ಕೆ ಮನವಿ


ಬಳ್ಳಾರಿ, 17 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳು ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅವರನ್ನು ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಭೇಟಿ ಮಾಡಿ ಕೊಲ್ಲಾಪುರ - ಮುನಗೂರು ಮತ್ತು .ಬಳ್ಳಾರಿ - ಗುಂತಕಲ್ - ಆದೋನಿ - ಹೈದರಾಬಾದ್ ಮೂಲಕ ವಾರಣಾಸಿ ತಲುಪುವ ಮೈಸೂರು - ಬಳ್ಳಾರಿ - ವಾರಣಾಸಿ ಮತ್ತು ಕೋಲಾಪುರ - ಬಳ್ಳಾರಿ - ಹೈದರಾಬಾದ್ - ಮುನುಗೂರು ರೈಲುಗಳ ಕುರಿತು ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಸಿಕಿಂದರಾಬಾದ್ ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸಂಜಯ ಕುಮಾರ್ ಶ್ರೀವಾತ್ಸವ ಹಾಗೂ ಗುಂತಕಲ್ ರೈಲ್ವೆ ವಿಭಾಗದ ಸೀನಿಯರ್ ಡಿಆರ್ಎಂ ಅವರನ್ನು ಭೇಟಿ ಮಾಡಿ, ಕೊಲ್ಲಾಪುರ - ಮುನಗೂರು ಮತ್ತು .ಬಳ್ಳಾರಿ - ಗುಂತಕಲ್ - ಆದೋನಿ - ಹೈದರಾಬಾದ್ ಮೂಲಕ ವಾರಣಾಸಿ ತಲುಪುವ ಮೈಸೂರು - ಬಳ್ಳಾರಿ - ವಾರಣಾಸಿ ಮತ್ತು ಕೋಲಾಪುರ - ಬಳ್ಳಾರಿ - ಹೈದರಾಬಾದ್ - ಮುನುಗೂರು ರೈಲುಗಳ ಕುರಿತು ಮನವಿ ಸಲ್ಲಿಸಿ, ಆದಷ್ಟು ಶೀಘ್ರದಲ್ಲಿ ಮಾರ್ಗಗಳ ಪ್ರಾರಂಭಕ್ಕೆ ಕೋರಿದರು.

ಕೊಲ್ಲಾಪುರ - ಮುನಗೂರು ದಿನನಿತ್ಯದ ರೈಲು ಬೆಳಗಾವಿ - ಹುಬ್ಬಳ್ಳಿ - ಬಳ್ಳಾರಿ - ಹೈದರಾಬಾದ್ ಮಾರ್ಗದಲ್ಲಿ ಸಂಚರಿಸುವ ರೈಲು ಕೋವಿಡ್-19ರ ಸಂದರ್ಭದಲ್ಲಿ ರದ್ದಾಗಿದೆ. ರೈಲ್ವೆ ಬಜೆಟ್ಟಿನಲ್ಲಿ ಮಂಜೂರಾಗಿರುವ

ಕೊಲ್ಲಾಪುರದಿಂದ ಆರಂಭವಾಗಿ ಬೆಳಗಾವಿ - ಧಾರವಾಡ - ಹುಬ್ಬಳ್ಳಿ - ಬಳ್ಳಾರಿ ಗುಂತಕಲ್ - ಆದೋನಿ ಮಂತ್ರಾಲಯಂ ರೋಡ್ ರಾಯಚೂರು ಮೂಲಕ ಹೈದರಾಬಾದ್ ತಲುಪಿ ಮುನಗುರು ತಲುಪುವ ಈ ರೈಲನ್ನು

ಪುನರಾರಂಭ ಮಾಡಬೇಕು. ನೈರುತ್ಯ ರೈಲ್ವೆ ಈ ಮಾರ್ಗಕ್ಕೆ ಆಸಕ್ತಿ ಹೊಂದಿದ್ದು ದಕ್ಷಿಣ ಮಧ್ಯ ರೈಲ್ವೆ ಈ ಮಾರ್ಗದ ನಿರ್ವಹಣೆಗೆ ನಿರಾಸಕ್ತಿ ಹೊಂದಿದೆ. ಈ ಮಾರ್ಗವನ್ನು ತ್ವರಿತವಾಗಿ ಪುನರಾರಂಭ ಮಾಡಬೇಕು ಎಂದರು.

ಬಳ್ಳಾರಿ - ಗುಂತಕಲ್ - ಆದೋನಿ ಮೂಲಕ ಹೈದರಾಬಾದ್ ಟು ವಾರಣಾಸಿಗೆ ಹೋಗಿ ಮೈಸೂರು - ಬಳ್ಳಾರಿ - ವಾರಣಾಸಿ ಮತ್ತು ಕೋಲಾಪುರ - ಬಳ್ಳಾರಿ - ಹೈದರಾಬಾದ್ ಮುನುಗೂರು ರೈಲುಗಳು ಗುಂತಕಲ್ ನಿಲ್ದಾಣದಲ್ಲಿ ಇಂಜಿನ್ ರಿವರ್ಸ್ ಮಾಡಿ ಸಂಚರಿಸುವ ವ್ಯವಸ್ಥೆ ಇದೆ. ಬಳ್ಳಾರಿ - ಗುಂತಕಲ್ಲು ಮೂಲಕ ಆದೋನಿಯ ರೈಲು ಮಾರ್ಗ 120 ಕಿಲೋ ಮೀಟರ್ ಆಗಿದೆ. ಹಗರಿಯಿಂದ ಆದೋನಿಗೆ ನೇರವಾಗಿ ನೂತನ ಬ್ರಾಡ್ಗೇಜ್ ರೈಲ್ವೆ ಮಾರ್ಗದ ರಚನೆ ಆದಲ್ಲಿ ಬಳ್ಳಾರಿಯಿಂz ಆಧೋನಿ ಕೇವಲ 75 ಕಿಲೋ ಮೀಟರ್. 45 ಕಿಮೀ ಅಂತರ ಕಡಿಮೆ ಆಗಲಿದೆ. ಕಾರಣ ಅಧಿಕಾಋರಿಗಳು ತ್ವರಿತವಾಗಿ ಈ ಮಾರ್ಗಗಳ ಪ್ರಾರಂಭಕ್ಕೆ ಗಮನ ನೀಡಬೇಕು ಎಂದು ಕೋರಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರುಗಳಾದ ಪಿ. ಬಂಡೇಗೌಡ, ಎಚ್.ಕೆ. ಗೌರಿಶಂಕರ, ಕೋಳೂರು ಚಂದ್ರಶೇಖರಗೌಡ, ಡಿಆರ್ಯುಸಿಸಿ ಸದಸ್ಯರಾದ ಕೆ.ಎಂ. ಕೊಟ್ರೇಶ, ಬಿಜೆಪಿ ರೈತ ಮೋರ್ಚಾದ ಗಣಪಾಲ್ ಐನಾಥರೆಡ್ಡಿ, ಬಿಡಿಸಿಸಿ ಬ್ಯಾಂಕಿನ ನಿವೃತ್ತ ಅಧಿಕಾರಿ ಬಿ.ಎಸ್. ಬಸವರಾಜ್ ಮೂರಿಗೆರೆ, ಕೊಟ್ರೇಶ್, ಜಾಲಿಹಾಳ್ ಶ್ರೀಧರ, ಮಧುಸೂದನಗೌಡ .ವಿ, ಸೂರ್ಯ ಪ್ರಕಾಶ್, ಕೆ. ಜಯಣ್ಣ ಶಿವಶಂಕರಗೌಡ ಇನ್ನಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande