ಪತ್ರಿಕಾ ಭವನದಲ್ಲಿ ಡಿ.ವಿ. ಗುಂಡಪ್ಪ ಜನ್ಮದಿನಾಚರಣೆ
ಗದಗ, 17 ಮಾರ್ಚ್ (ಹಿ.ಸ.) ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಿ ವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಗದಗ ನಗರದ ಮುಳಗುಂದ ರಸ್ತೆಯ ಪತ್ರಿಕಾ ಭವನದಲ್ಲಿ ಗೌರವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸ
ಫೋಟೋ


ಗದಗ, 17 ಮಾರ್ಚ್ (ಹಿ.ಸ.)

ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಿ ವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಗದಗ ನಗರದ ಮುಳಗುಂದ ರಸ್ತೆಯ ಪತ್ರಿಕಾ ಭವನದಲ್ಲಿ ಗೌರವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಪತ್ರಿಕಾ ಕ್ಷೇತ್ರದ ಅಪಾರ ಸೇವೆಯನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರಾಜು ಎಂ ಹೆಬ್ಬಳ್ಳಿ ಅವರು, ಡಿ.ವಿ. ಗುಂಡಪ್ಪನವರು 1932ರಲ್ಲಿ ಮೈಸೂರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪನೆ ಮಾಡಿದ ಮಹನೀಯರು ಎಂದು ಹೇಳಿದರು. ಬಳಿಕ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದ ನಂತರ ಸಂಘಕ್ಕೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಮರುನಾಮಕರಣಗೊಂಡಿತು ಎಂದು ವಿವರಿಸಿದರು.

ಇದುವರೆಗೆ ಹೆಚ್ ಎಸ್ ದೊರೆಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶಿವಾನಂದ ತಗಡೂರು ರಾಜ್ಯಾಧ್ಯಕ್ಷರಾಗಿದ್ದಾರೆ. ಜಿ ಸಿ ಲೋಕೇಶ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಘದ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ, ಕಾರ್ಯದರ್ಶಿ ಸಂಗಮೇಶ ವ್ಯಾಪಾರಿ, ಖಜಾಂಚಿ ರಾಮಣ್ಣ ವಗ್ಗಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಆನಂದಯ್ಯ ವಿರಕ್ತಮಠ, ಮೌನೇಶ್ವರ ಬಡಿಗೇರ, ಸಂತೋಷ ಕೊಣ್ಣೂರ, ಮಂಜುನಾಥ ಪತ್ತಾರ, ರುದ್ರಗೌಡ ಪಾಟೀಲ್, ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಲ್ಲದೆ ಪತ್ರಕರ್ತರಾದ ಸತೀಶ ಬೆಳ್ಳಕ್ಕಿ, ನಾಗರಾಜ ಕಟ್ಟಿಮನಿ, ಅಶೋಕ ಹೂಗಾರ, ಕ್ಯಾಮೆರಾಮನ್ಗಳಾದ ಜಾಕೀರ್ ನರಗುಂದ, ವಿಜಯಕುಮಾರ ಕಾಗನೂರಮಠ, ಶಂಭುಲಿಂಗಯ್ಯ ಕಾಲವಾಡಮಠ, ಛಾಯಾಗ್ರಾಹಕರಾದ ಶಂಕರ ಗುರಿಕಾರ, ಯಚ್ಚರಪ್ಪ ಮಹೇಂದ್ರರ, ಲಕ್ಷ್ಮಣ ವಗ್ಗಿ, ಜಾಹೀರಾತು ಪ್ರತಿನಿಧಿ ಶರಣಪ್ಪ ಮೆಣಸಿನಕಾಯಿ ಹಾಗೂ ಸಿಬ್ಬಂದಿ ಪರಶುರಾಮ ಹಳ್ಳದ ಸೇರಿದಂತೆ ಇತರರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮವು ಡಿವಿಜಿ ಅವರ ಸ್ಮರಣೆ ಹಾಗೂ ಪತ್ರಿಕಾ ಕ್ಷೇತ್ರದ ಮಹತ್ವವನ್ನು ಮತ್ತೊಮ್ಮೆ ಮನದಟ್ಟುಗೊಳಿಸುವಂತಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande