


ಬಳ್ಳಾರಿ, 17 ಮಾರ್ಚ್ (ಹಿ.ಸ.)
ಆ್ಯಂಕರ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಬಳ್ಳಾರಿ ಘಟಕವು `ನಶಾಮುಕ್ತ ಕ್ಯಾಂಪಸ್’ ಜಾಗೃತಿ ಅಭಿಯಾನವನ್ನು ನಗರದ ಸರಳಾದೇವಿ ಕಾಲೇಜಿನಿಂದ ಸಂಗಂದ ಮೂಲಕ ಗಡಿಗೆ ಚೆನ್ನಪ್ಪ ವೃತ್ತದಿಂದ ಗಾಂಧಿಭವನದಲ್ಲಿ ಸಮಾರೋಪಗೊಂಡಿತು.
ಎಬಿವಿಪಿ ರಾಜ್ಯಕಾರ್ಯದರ್ಶಿ ದರ್ಶನ್ ಹೆಗಡೆ ಅವರು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಗಾಂಜಾ ಮತ್ತು ಡ್ರಗ್ಸ್ ಹಾವಳಿಯಿಂದಾಗಿ ಬಳ್ಳಾರಿಯ ಪ್ರತಿμÉ್ಠಯು ರಾಜ್ಯದಲ್ಲಿ ಕುಗ್ಗಿದೆ. ಶಾಲಾ ಮತ್ತು ಕಾಲೇಜಿನಲ್ಲಿ ಮಾದಕ ವಸ್ತುಗಳ ಪೂರೈಕೆಯಾಗುತ್ತಿದೆ. ಪ್ಯೂಪುಲ್ ಟ್ರೀ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮಾದಕ ವಸ್ತು ಸೇವನೆ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಪ್ರಸರಣಗೊಂಡಿದ್ದರೂ ಕಾಲೇಜಿನ ಅಡಳಿತ ಮಂಡಳಿಯು ಕ್ರಮಕೈಗೊಂಡಿಲ್ಲ ಎಂದರು.
ಡಾ. ಬಿ.ಕೆ. ಸುಂದರ್ ಅವರು ಮುಖ್ಯ ಅತಿಥಿಗಳಾಗಿ, ಮಾದಕ ಪದಾರ್ಥಗಳು ಸಮಾಜಕ್ಕೆ, ದೇಶಕ್ಕೆ ಮಾರಕ. ಯುವಕರು ಡ್ರಗ್ಸ್ ಮತ್ತು ಗಾಂಜಾ ವಸ್ತುಗಳಿಂದ ದೂರವಿರಬೇಕು. ಡ್ರಗ್ಸ್ ಆರೋಗ್ಯದ ಮೇಲೆ ವಿಪರೀತಿ ಪರಿಣಾಮ ಬೀರಲಿದೆ. ದೇಹಕ್ಕೆ ನಶೆ ಉಂಟು ಮಾಡುವ ಪದಾರ್ಥಗಳಿಗೆ ಯುವ ಪೀಳಿಗೆಯು ಬಲಿಯಾಗಬಾರದು ಎಂದರು.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭರತ್. ಟಿ, ಜಿಲ್ಲಾ ಸಂಚಾಲಕ ಕೆ. ದಿಲೀಪ್ ಕುಮಾರ್, ಕಾರ್ಯಕರ್ತರಾದ ರಘು, ಮಹೇಶ, ಚೇತನ್, ಶಿವಕುಮಾರ, ಶರಣಬಸವ ಈ ಸಂದರ್ಭದಲ್ಲಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್