
ಇಂಫಾಲ, 16 ಮಾರ್ಚ್ (ಹಿ.ಸ.):
ಆ್ಯಂಕರ್:
ಮಣಿಪುರ ಪೋಲಿಸರು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ಮಾದಕ ದ್ರವ್ಯ ಹಾಗೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದೆ.
ಮೊರೆಹ್ನ ಯುಕೋ ಬ್ಯಾಂಕ್ ಕಟ್ಟಡದೊಳಗೆ ನುಗ್ಗಿ ಉಪಕರಣಗಳನ್ನು ಕದಿಯಲು ಯತ್ನಿಸಿದ್ದ ಕಿಶನ್ ಚೌಹಾಣ್ (29) ಬಂಧಿತನಾಗಿದ್ದು, ಕದ್ದಿದ್ದ ಸೌಂಡ್ ಬಾಕ್ಸ್ ಮತ್ತು ಎಸಿ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಖುಮಾನ್ ಲ್ಯಾಂಪಕ್ ಕ್ರೀಡಾ ಸಂಕೀರ್ಣ ಬಳಿ ಹೆಫಾಜುದ್ದೀನ್ ಮಯಾಂಗ್ಮ್ಯುಮ್ (42) ಎಂಬಾತನಿಂದ 1.002 ಕಿಲೋ ಅಫೀಮು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಸಗೋಲ್ಶೆಮ್ ಬೋಯಿಚಾ ಸಿಂಗ್ (42) ಅಲಿಯಾಸ್ ತೈಯಿ ಎಂಬಾತನನ್ನು ಬಂಧಿಸಿ .32 ಪಿಸ್ತೂಲ್, ಎರಡು ಮ್ಯಾಗಜೀನ್ ಹಾಗೂ 10 ಗುಂಡುಗಳು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ಭದ್ರತಾ ಪಡೆಗಳು 115 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa