ಮಾತುವಾ ಧರ್ಮ ಮೇಳಕ್ಕೆ ಅಮಿತ್ ಶಾ ಶುಭಾಶಯ
ನವದೆಹಲಿ, 16 ಮಾರ್ಚ್ (ಹಿ.ಸ.): ಆ್ಯಂಕರ್: ಪೂರ್ಣಬ್ರಹ್ಮ ಹರಿಚಂದ್ ಠಾಕೂರ್ ಅವರ 215ನೇ ಜಯಂತಿ ಅಂಗವಾಗಿ ಆಯೋಜಿಸಲಾಗುತ್ತಿರುವ ಮಾತುವಾ ಧರ್ಮ ಮೇಳದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತುವಾ ಸಮುದಾಯಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು
Amit sha


ನವದೆಹಲಿ, 16 ಮಾರ್ಚ್ (ಹಿ.ಸ.):

ಆ್ಯಂಕರ್:

ಪೂರ್ಣಬ್ರಹ್ಮ ಹರಿಚಂದ್ ಠಾಕೂರ್ ಅವರ 215ನೇ ಜಯಂತಿ ಅಂಗವಾಗಿ ಆಯೋಜಿಸಲಾಗುತ್ತಿರುವ ಮಾತುವಾ ಧರ್ಮ ಮೇಳದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತುವಾ ಸಮುದಾಯಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಪೂರ್ಣಬ್ರಹ್ಮ ಹರಿಚಂದ್ ಠಾಕೂರ್ ಒಬ್ಬ ದೈವಿಕ ವ್ಯಕ್ತಿತ್ವವಾಗಿದ್ದು, ಭಾರತೀಯ ಜ್ಞಾನ ಪರಂಪರೆಯ ಆಳವನ್ನು ಅರಿತುಕೊಂಡ ಮಹನೀಯರಾಗಿದ್ದರು ಎಂದು ತಿಳಿಸಿದ್ದಾರೆ. ಸಮಾಜದಲ್ಲಿ ಭಕ್ತಿ, ಸಮಾನತೆ ಮತ್ತು ನೈತಿಕ ಜೀವನ ಎಂಬ ಮೌಲ್ಯಗಳನ್ನು ಅವರು ಪ್ರಚಾರ ಮಾಡಿದರು ಎಂದು ಹೇಳಿದರು.

ಹರಿಚಂದ್ ಠಾಕೂರ್ ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಸಮಾನತೆಯ ಆಧಾರಿತ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ ಎಂದು ಅಮಿತ್ ಶಾ ಹೇಳಿದರು.

2026ರಲ್ಲಿ ಪಶ್ಚಿಮ ಬಂಗಾಳದ ೨೪ ಪರಗಣ ಜಿಲ್ಲೆಯಲ್ಲಿ ನಡೆಯಲಿರುವ ಮಾತುವಾ ಧರ್ಮ ಮೇಳವು ಸಮುದಾಯದ ಈ ಮೌಲ್ಯಗಳಿಗೆ ಇರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande