45,000 ಟನ್ ಅಡುಗೆ ಅನಿಲ ಭಾರತಕ್ಕೆ; ಎಲ್ಪಿಜಿ ಕೊರತೆ ನಿವಾರಣೆಗೆ ನಿರೀಕ್ಷೆ
ನವದೆಹಲಿ, 16 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ಭಾರತಕ್ಕೆ ಸ್ವಲ್ಪ ನಿರಾಳತೆ ದೊರೆತಿದೆ. ಶಿವಾಲಿಕ್ ಎಲ್‌ಪಿಜಿ ಟ್ಯಾಂಕರ್ ಎಂಬ ಭಾರತೀಯ ಧ್ವಜದ ಎಲ್‌ಪಿಜಿ ಹಡಗು 45,000 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ ಹೊತ್ತು ಮುಂಬಯಿನ ಮುಂದ್ರಾ ಬಂದರು ಬಂ
LPG


ನವದೆಹಲಿ, 16 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ಭಾರತಕ್ಕೆ ಸ್ವಲ್ಪ ನಿರಾಳತೆ ದೊರೆತಿದೆ. ಶಿವಾಲಿಕ್ ಎಲ್‌ಪಿಜಿ ಟ್ಯಾಂಕರ್ ಎಂಬ ಭಾರತೀಯ ಧ್ವಜದ ಎಲ್‌ಪಿಜಿ ಹಡಗು 45,000 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ ಹೊತ್ತು ಮುಂಬಯಿನ ಮುಂದ್ರಾ ಬಂದರು ಬಂದರನ್ನು ಸೋಮವಾರ ಸುರಕ್ಷಿತವಾಗಿ ತಲುಪಿದೆ.

ಈ ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಬಂದಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕೆಲ ದಿನಗಳಿಂದ ಅಲ್ಲೇ ಸಿಲುಕಿಕೊಂಡಿತ್ತು. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿಗಳ ಹಿನ್ನೆಲೆ ಈ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿ ಸಾಗಣೆ ವ್ಯತ್ಯಯ ಉಂಟಾಗಿತ್ತು.

ಜಲಮಾರ್ಗ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರ ಪ್ರಕಾರ, ಹಡಗು ಸೋಮವಾರ ಸಂಜೆ ಸುಮಾರು 5 ಗಂಟೆಗೆ ಮುಂದ್ರಾ ಬಂದರನ್ನು ತಲುಪಿದೆ. ಹಡಗಿನ ಸರಕು ಬಿಡುಗಡೆಗೆ ಯಾವುದೇ ವಿಳಂಬವಾಗದಂತೆ ಬಂದರಿನಲ್ಲಿ ಮುಂಚಿತವಾಗಿ ದಸ್ತಾವೇಜೀಕರಣ ಮತ್ತು ಆದ್ಯತೆಯ ಬರ್ತಿಂಗ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಸುರಕ್ಷತೆಯ ಬಗ್ಗೆ ಮಾತನಾಡಿದ ಅವರು, “ಕಳೆದ 24 ಗಂಟೆಗಳಲ್ಲಿ ಯಾವುದೇ ಅಪ್ರಿಯ ಘಟನೆ ಸಂಭವಿಸಿಲ್ಲ. ನಾವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಹಾಗೂ ಪ್ರತಿಯೊಂದು ಹಡಗು ಮತ್ತು ಅದರ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದೇವೆ,” ಎಂದು ತಿಳಿಸಿದ್ದಾರೆ.

ಅವರ ಮಾಹಿತಿ ಪ್ರಕಾರ, 611 ಭಾರತೀಯ ನಾವಿಕರೊಂದಿಗೆ 22 ಭಾರತೀಯ ಧ್ವಜದ ಹಡಗುಗಳು ಇನ್ನೂ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ, ಹಾರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಉಳಿದಿವೆ.

ಇದಕ್ಕೂ ಮುನ್ನ ಜಲಸಂಧಿ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಾಗಣೆ ಹಡಗುಗಳು ಅಲ್ಲಿ ಸಿಲುಕಿಕೊಂಡಿದ್ದವು. ನಂತರ ಭಾರತ ಸರ್ಕಾರ ನಡೆಸಿದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇರಾನ್ ವಿದೇಶಾಂಗ ಸಚಿವಾಲಯದ ನಡುವೆ ಚರ್ಚೆ ನಡೆಯಿತು. ಅದರ ಬಳಿಕ ‘ಶಿವಾಲಿಕ್’ ಮತ್ತು ‘ನಂದಾ’ ಎಂಬ ಎರಡು ಭಾರತೀಯ ಹಡಗುಗಳಿಗೆ ಜಲಸಂಧಿ ದಾಟಲು ಅನುಮತಿ ನೀಡಲಾಗಿದೆ.

ಎರಡನೇ ಹಡಗು ‘ನಂದಾ’ ಕೂಡ ಶೀಘ್ರದಲ್ಲೇ ಭಾರತ ತಲುಪುವ ನಿರೀಕ್ಷೆಯಿದ್ದು, ದೇಶದಲ್ಲಿ ಕಂಡುಬಂದಿರುವ ಅಡುಗೆ ಅನಿಲ ಕೊರತೆ ನಿವಾರಣೆಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande