ಮಣಿಪುರದಲ್ಲಿ ಉಗ್ರ ಸಂಘಟನ ಕೆಸಿಪಿಯ ಇಬ್ಬರು ಕಾರ್ಯಕರ್ತರ ಬಂಧನ
ಇಂಫಾಲ, 13 ಮಾರ್ಚ್ (ಹಿ.ಸ.): ಆ್ಯಂಕರ್: ಮಣಿಪುರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಉಗ್ರ ಸಂಘಟನೆ ಕಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ (ಕೆಸಿಪಿ)ಗೆ ಸೇರಿದ ಇಬ್ಬರು ಸಕ್ರಿಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇಂಫಾಲದಲ್ಲಿರುವ ಪೊಲೀಸ್
Arrest


ಇಂಫಾಲ, 13 ಮಾರ್ಚ್ (ಹಿ.ಸ.):

ಆ್ಯಂಕರ್:

ಮಣಿಪುರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಉಗ್ರ ಸಂಘಟನೆ ಕಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ (ಕೆಸಿಪಿ)ಗೆ ಸೇರಿದ ಇಬ್ಬರು ಸಕ್ರಿಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಇಂಫಾಲದಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಗುರುವಾರ ಭದ್ರತಾ ಪಡೆಗಳು ತೌಬಲ್ ಜಿಲ್ಲೆಯ ತೌಬಲ್ ವಾಂಗ್ಮಾ ತಬಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಕೆಸಿಪಿ (ತೈಬಂಗನ್ಬಾ) ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಿವೆ.

ಬಂಧಿತರನ್ನು ಅರೋಂಗ್ ಖುನೌ ಅವಾಂಗ್ ಲೈಕೈ ನಿವಾಸಿ ನಿಂಗ್ತೌಜಮ್ ಥೋಯಿ ಲಿಮಾ (ಅಲಿಯಾಸ್ ಸುಂದರಿ, 41) ಮತ್ತು ತೌಬಲ್ ಖೇತ್ರಿ ಲೈಕೈ ನಿವಾಸಿ ನಿಂಗ್ತೌಜಮ್ ಹೇಮಂತ್ ಸಿಂಗ್ (ಅಲಿಯಾಸ್ ನವೋಚಾ, 28) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 9 ಎಂಎಂ ಪಿಸ್ತೂಲಿನ 140 ಸುತ್ತುಗಳ ಮದ್ದುಗುಂಡುಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande