
ನವದೆಹಲಿ, 13 ಮಾರ್ಚ್ (ಹಿ.ಸ.):
ಆ್ಯಂಕರ್:
2025ರಲ್ಲಿ ಸಂಭವಿಸಿದ ಪ್ರವಾಹ, ದಿಢೀರ್ ಪ್ರವಾಹ, ಮೇಘಸ್ಫೋಟ, ಭೂಕುಸಿತ ಹಾಗೂ ‘ಮೊಂಥಾ’ ಚಂಡಮಾರುತದಿಂದ ಹಾನಿಗೊಳಗಾದ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚುವರಿ ನೆರವು ಮಂಜೂರು ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು ₹1,912.99 ಕೋಟಿ ರೂಪಾಯಿಗಳ ನೆರವನ್ನು ಅನುಮೋದಿಸಲಾಗಿದೆ. ಈ ನೆರವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ ಮೂಲಕ ಬಿಡುಗಡೆ ಮಾಡಲಾಗುವುದು.
ಈ ನೆರವಿನ ಭಾಗವಾಗಿ ಆಂಧ್ರಪ್ರದೇಶಕ್ಕೆ ₹341.48 ಕೋಟಿ, ಛತ್ತೀಸ್‌ಗಢಕ್ಕೆ ₹15.70 ಕೋಟಿ, ಗುಜರಾತ್‌ಗೆ ₹778.67 ಕೋಟಿ, ಹಿಮಾಚಲ ಪ್ರದೇಶಕ್ಕೆ ₹288.39 ಕೋಟಿ, ನಾಗಾಲ್ಯಾಂಡ್‌ಗೆ ₹158.41 ಕೋಟಿ ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ₹330.34 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಈ ನೆರವು ರಾಜ್ಯಗಳ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ ಲಭ್ಯವಿರುವ ವರ್ಷದ ಆರಂಭಿಕ ಬಾಕಿಯ ಶೇಕಡಾ 50 ರಷ್ಟು ಹೊಂದಾಣಿಕೆಗೆ ಒಳಪಟ್ಟಿರುತ್ತದೆ. ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಹೆಗಲಿಗೆ ಹೆಗಲು ನೀಡಿ ನಿಂತು ಅಗತ್ಯ ಸಹಾಯ ಒದಗಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಇದಕ್ಕೂ ಮೊದಲು 2025–26ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಎಸ್‌ಡಿಆರ್‌ಎಫ್ ಅಡಿಯಲ್ಲಿ 28 ರಾಜ್ಯಗಳಿಗೆ ₹20,735.20 ಕೋಟಿ ಹಾಗೂ ಎನ್‌ಡಿಆರ್‌ಎಫ್ ಅಡಿಯಲ್ಲಿ 21 ರಾಜ್ಯಗಳಿಗೆ ₹3,628.18 ಕೋಟಿ ಬಿಡುಗಡೆ ಮಾಡಿದೆ. ಇದಲ್ಲದೆ ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿ ಮೂಲಕ 23 ರಾಜ್ಯಗಳಿಗೆ ₹5,373.20 ಕೋಟಿ ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಮೂಲಕ 21 ರಾಜ್ಯಗಳಿಗೆ ₹1,189.56 ಕೋಟಿ ನೆರವು ನೀಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa