ಪಿಯುಸಿ ಮಂಡಳಿ ವಿಲೀನ : ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ಕೊಪ್ಪಳ, 12 ಮಾರ್ಚ್ (ಹಿ.ಸ.) ಆ್ಯಂಕರ್: ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯನ್ನುಜಿಲ್ಲಾ ಪಂಚಾಯತಿಗೆ ವಹಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರಾಚಾರ್ಯರು, ಉಪನ್ಯಾಸಕರು ಗ್ರಂಥಪಾಲಕರು ಮತ್ತು ಭೋಧಕೇತರ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ
ಪಿಯುಸಿ ಮಂಡಳಿ ವಿಲೀನ : ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ


ಪಿಯುಸಿ ಮಂಡಳಿ ವಿಲೀನ : ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ


ಪಿಯುಸಿ ಮಂಡಳಿ ವಿಲೀನ : ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ


ಕೊಪ್ಪಳ, 12 ಮಾರ್ಚ್ (ಹಿ.ಸ.)

ಆ್ಯಂಕರ್: ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯನ್ನುಜಿಲ್ಲಾ ಪಂಚಾಯತಿಗೆ ವಹಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರಾಚಾರ್ಯರು, ಉಪನ್ಯಾಸಕರು ಗ್ರಂಥಪಾಲಕರು ಮತ್ತು ಭೋಧಕೇತರ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯತಿಗೆ ಮೇಲುಸ್ತುವಾರಿ ವಹಿಸುವ ಪ್ರಾಸ್ತಪಿತ ಕಡತ ಹಿಂಪಡೆಯಲು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಅದರಂತೆ ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ, ಉಪನ್ಯಾಸಕರ, ಗ್ರಂಥಪಾಲಕರ ಮತ್ತು ಬೋಧಕೇತರು ಒಕ್ಕೂಟದಿಂದ ಕಪ್ಪುಪಟ್ಟಿ ಧರಿಸಿ ಮನವಿ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಸಿದ್ಧರಾಮೇಶ್ವರರವರು ಮನವಿ ಸ್ವೀಕರಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಲಾಗುವುದು ಎಂದರು.

ಈ ಕಡತ ಜಾರಿ ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವವನ್ನೇ ಕಳೆದಂತಾಗುತ್ತದೆ. ಇಲಾಖೆಯ ಬಗ್ಗೆ ಮಾಹಿತಿ ಇಲ್ಲದ ಅಧಿಕಾರಿಗಳಿಂದ ಮೇಲಸ್ತುವಾರಿ ಮಾಡಿಸುವುದು ಸರಿಯಲ್ಲ. ನಮ್ಮ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರು, ಜಂಟಿ ನಿರ್ದೇಶಕರು, ನಿರ್ದೇಶಕರು ಇರುವಾಗ ಮತ್ತು ನಮ್ಮ ನೇಮಕಾತಿ ಪ್ರಾಧಿಕಾರವಲ್ಲದ ಅಧಿಕಾರಿಗಳ ಮೇಲುಸ್ತುವಾರಿ ಸಮಂಜಸವಲ್ಲ ಎಂದು ನೌಕರರು ವಿರೋಧ ವ್ಯಕ್ತಪಡಿಸಿದರು.

ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷ ಬಸಪ್ಪ ನಾಗೋಲಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಳಗುಂದಿ ಹಿರಿಯ ಪ್ರಾಚಾರ್ಯರುಗಳಾದ ರಾಜಶೇಖರ ಪಾಟೀಲ, ಶಾಂತಪ್ಪ ಟಿ.ಸಿ, ಶಿವಾನಂದ ಎ.ಆರ್, ಡಾ. ನಾಗಪುಷ್ಪಲತಾ, ಬಸವರಾಜ, ಮಂಜುನಾಥ ಸ್ವಾಮಿ, ಎನ್. ಪಾಂಡುರಂಗ, ಡಾ. ರವಿ ಚೌವಾಹಣ ಉಪನ್ಯಾಸಕರುಗಳಾದ ಸಿದ್ದಲಿಂಗಪ್ಪ ಕೊಟ್ನೆಕಲ್, ಎಸ್.ವ್ಹಿ. ಮೇಳಿ, ತಿರುಪತಿ ನಾಯಕ, ಮಹಿಬೂಬ ಅಲಿ, ಮಹಾನಂದಿ, ಡಾ. ರಾಜಕುಮಾರ, ಶಿವಾನಂದ ಮೇಟಿ, ಪತ್ರಪ್ಪ ಛತ್ತರಕಿ, ವಿಜಯಲಕ್ಷ್ಮೀ, ಹೇಮಾ ಜೋಷಿ, ಗ್ರಂಥಪಾಲಕ ರಮೇಶ ಗಬ್ಬೂರು ಇತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande