




ಕೂಡ್ಲಿಗಿ, 12 ಮಾರ್ಚ್ (ಹಿ.ಸ.)
ಆ್ಯಂಕರ್: ರಸ್ತೆಗೆ ಕಣ ಮಾಡಲು ಹಾಕಿದ್ದ ರಾಗಿಯ ಮೇಲೆ ದ್ವಿಚಕ್ರ ವಾಹನ ಚಾಲನೆ ಮಾಡಿದ ಕಾರಣ ವಾಹನ ಸ್ಕಿಡ್ ಆಗಿ ಸವಾರರು ಇಬ್ಬರು ರಸ್ತೆಗೆ ಬಿದ್ದಾಗ, ಲಾರಿಯೊಂದು ಅವರ ಮೇಲೆ ಹರಿದುಹೋದ ಕಾರಣ ಅಜ್ಜ - ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾಗಿ - 50 ರ ಕ್ಯಾಸನಕೆರೆ ಬಳಿ ಗುರುವಾರ ಮಧ್ಯಾಹ್ನ 1 ಗಂಟೆಗೆ ನಡೆದಿದೆ.
ಮೃತರು ಈಶ್ವರಪ್ಪ (55) ಮತ್ತು ಅವರ ಮೊಮ್ಮಗಳಾದ ಸೃಷ್ಠಿ (14). ಮೃತರು ಕರ್ನಾರ್ ಹಟ್ಟಿ ನಿವಾಸಿಗಳು. ಸೃಷ್ಠಿಯು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದು, ಪರೀಕ್ಷೆಗಳು ಮುಗಿದ ಕಾರಣ ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್