
ಬಳ್ಳಾರಿ, 08 ಮಾರ್ಚ್ (ಹಿ.ಸ.):
ಆ್ಯಂಕರ್:
ಬಳ್ಳಾರಿಯ ಗುರುಕುಲ ಶಾಲೆಯ ಹಾಸ್ಟಲ್ ನಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಗಳ ಮೇಲೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಒಬ್ಬ ವಿದ್ಯಾರ್ಥಿಯನ್ನು ಕೊಲೆ ಮಾಡಿ, ಇತರರ ಮೇಲೆ ಹಲ್ಲೆ ನಡೆಸಿ ಹಾಸ್ಟೆಲ್ ನಿಂದ ಪರಾರಿ ಆಗಿದ್ದಾನೆ.
ಮೃತ ವಿದ್ಯಾರ್ಥಿ ಆಂದ್ರಪ್ರದೇಶದ ಆಲೂರು ತಾಲೂಕಿನ ಸಮ್ಮತಗೇರಿ ಗ್ರಾಮದ ಹೇಮಂತ್ (14). ಈತನು ಒಂಭತ್ತನೇ ತರಗತಿ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ವಿದ್ಯಾರ್ಥಿಗಳು ಸೇರಿ, ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಐಜಿಪಿ ಹರ್ಷ ಅವರು ಶನಿವಾರ ರಾತ್ರಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಅಲ್ಲದೇ, ಗಾಯಾಳುಗಳನ್ನು ಬಿಮ್ಸ್ ನಲ್ಲಿ ಭೇಟಿ ಮಾಡಿದ್ದಾರೆ.
ಗುರುಕುಲ ಶಾಲೆಯ ಮುಂದೆ ಹಾಸ್ಟಲ್ ವಿದ್ಯಾರ್ಥಿಗಳ ಪೋಷಕರು ಜಮಾವಣೆಗೊಂಡಿದ್ದು, ಸಾರ್ವಜನಿಕರೂ ಸೇರಿದ್ದಾರೆ.
ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ತಂಡೋಪತಂಡವಾಗಿ ಹಾಸ್ಟಲ್ ಗೆ ಭೇಟಿ ನೀಡುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಬಿಗುವಿನ ವಾತಾವರಣವಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa