ನಗರಸಭೆಯಲ್ಲಿ ಭ್ರಷ್ಟಾಚಾರ ; ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ
ನಗರಸಭೆಯಲ್ಲಿ ಭ್ರಷ್ಟಾಚಾರ ; ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ
ಕೋಲಾರ ನಗರಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ೦೫ ಫೆಬ್ರವರಿ (ಹಿ.ಸ) :

ಆ್ಯಂಕರ್ : ನಗರಸಭೆ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಹೆಚ್ಚು ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ. ಖಾತೆ, ಜನನ ಮರಣ ಪ್ರಮಾಣಪತ್ರಕ್ಕೆ ಹಣ ಕೇಳುತ್ತಿರುವ ದೂರು ಜನರಿಂದ ಬರುತ್ತಿದೆ. ಏಕೆ ಕೆಲಸ ವಿಳಂಬ ಮಾಡುತ್ತಿದ್ದೀರಿ? ದೂರುಗಳು ಬಂದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಗುರುವಾರ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ನಗರದ ಹಲವು ಕಾಲುವೆಗಳು ಪ್ಲಾಸ್ಟಿಕ್ ಮಯವಾಗಿವೆ. ಅಂಗಡಿಗಳ ಮೇಲೆ ಪ್ಲಾಸ್ಟಿಕ್ ದಾಳಿ ನಡೆಸುವುದರಿಂದ ಪ್ರಯೋಜನ ಇಲ್ಲ. ಪ್ಲಾಸ್ಟಿಕ್ ಮೂಲ ಪತ್ತೆ ಮಾಡಿ ಎಲ್ಲಿಂದ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಿ ದಾಳಿ ಮಾಡಿ ಮೂರು ತಿಂಗಳಲ್ಲಿ ಪ್ಲಾಸ್ಟಿಕ್ ಇಲ್ಲದಂತೆ ಮಾಡಬೇಕು ಇದ್ದರೆ ಕೇಸ್ ಹಾಕುವ ಎಚ್ಚರಿಕೆ ನೀಡಬೇಕು ಎಂದರು.

ಪ್ಲಾಸ್ಟಿಕ್ ಸಂಬAಧ ಮಾತನಾಡಿದ ಆಯುಕ್ತ ನವೀನ್ ಚಂದ್ರ, ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಅನಿರೀಕ್ಷಿತ ದಾಳಿ ನಡೆಸುತ್ತೇವೆ. ಶಾಸಕರು ಮಾತು ಮುಂದುವರಿಸಿ ನಗರಸಭೆ ಚುನಾವಣೆ ಸದ್ಯಕ್ಕೆ ನಡೆಯಲ್ಲ. ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾದರೆ ಸುಮ್ಮನಿರಲ್ಲ. ಬೇಸಿಗೆ ಬರುತ್ತಿದ್ದು, ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನಗರದಲ್ಲಿ ೩೦೦ ಕೊಳವೆ ಬಾವಿ ಇವೆ. ೨೦ ಕೊಳವೆಬಾವಿ ಕೊರೆಯಿಸಲು ಅಧಿಕಾರಿಗಳು ಪ್ರಸ್ತಾಪ ಕಳಿಸಿದರೆ ಅನುದಾನ ಕೊಡಿಸಲಾಗುವುದು ಶಾಸಕರಿಗೆ ೫೦ ಕೋಟಿ ವಿಶೇಷ ಅನುದಾನ ಸಿಗುತ್ತಿದೆ. ಅದರಲ್ಲಿ ಸ್ವಲ್ಪ ಅನುದಾನ ತೆಗೆದಿರಿಸಲಾಗುವುದು ಎಂದರು.

ತೆರಿಗೆ ಸಂಗ್ರಹ ವೇಗವಾಗಿ ನಡೆಯಬೇಕು. ವಾಣಿಜ್ಯ ಚಟುವಟಿಕೆ ನಡೆಸುವ ಮಳಿಗೆಗಳ ತೆರಿಗೆ ಸಂಗ್ರಹಿಸಬೇಕು. ನಗರದಲ್ಲಿ ೪೦ ಸಾವಿರ ಆಸ್ತಿಗಳಿವೆ. ವಾಣಿಜ್ಯ ಮಳಿಗೆ ಬಳಿ ಹೋಗಿ ಪರಿಶೀಲಿಸಿ ತೆರಿಗೆ ವಸೂಲಿ ಮಾಡಬೇಕು. ನೀರಿನ ಕರ ವಸೂಲಿಗೂ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಆಯುಕ್ತ ನವೀನ್ ಚಂದ್ರ ಮಾತನಾಡಿ, ೧೧ ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ. ೧ ಕೋಟಿ ಬಾಕಿ ಇದೆ. ಈ ಸಂಬAಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ನಾಲ್ಕು ಮನೆಗೆ ನಲ್ಲಿ ಹಾಕಿದ್ದರೆ ನಾಲ್ಕು ಮಂದಿ ಠೇವಣಿ ಕಟ್ಟಬೇಕು. ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು. ಜನನ ಮರಣ ಪ್ರಮಾಣಪತ್ರ ವಿತರಣೆ ಸಂಬAಧ ನಗರದ ಎಲ್ಲ ಆಸ್ಪತ್ರೆ ಸೇರಿಸಿ ಸಭೆ ನಡೆಸಲಾಗುವುದು. ಯಾವುದೇ ವಿಳಂಬ, ನ್ಯೂನತೆಗೆ ಅವಕಾಶ ನೀಡುವುದಿಲ್ಲ ಎಂದರು.

ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರ : ಕೋಲಾರ ನಗರಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳ ಸಭೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande