ವೇಮಗಲ್-ಬೆಂಗಳೂರು ನಡುವೆ ನೇರ ಬಸ್ ಸಂಚಾರ ಆರಂಭ
ವೇಮಗಲ್-ಬೆಂಗಳೂರು ನಡುವೆ ನೇರ ಬಸ್ ಸಂಚಾರ ಆರಂಭ
ಕೋಲಾರ ತಾಲ್ಲೂಕಿನ ವೇಮಗಲ್ ಬೆಂಗಳೂರು ನಡುವೆ ಗುರುವಾರ ನೇರ ಬಸ್ ಸಂಚಾರ ಆರಂಭವಾಯಿತು.


ಕೋಲಾರ, ೦೫ ಫೆಬ್ರವರಿ (ಹಿ.ಸ) :

ಆ್ಯಂಕರ್ : ತಾಲೂಕಿನ ವೇಮಗಲ್-ನರಸಾಪುರ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚಾಗಿದ್ದು ಸಾರ್ವಜನಿಕರ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಬಸ್ ಮಾರ್ಗಗಳನ್ನು ಕಲ್ಪಿಸಿ ಜನಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಕೋಲಾರ ತಾಲೂಕಿನ ವೇಮಗಲ್ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಬೆಂಗಳೂರಿಗೆ ನೇರ ಮಾರ್ಗದ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು ಮಾರ್ಚ್ ನಂತರ ಹೊಸ ಬಸ್ ಗಳು ಬರಲಿದ್ದು ಅವಶ್ಯಕತೆ ಇರುವ ಕಡೆ ಬಸ್ ಗಳನ್ನು ಆದ್ಯತೆ ಮೇರಿಗೆ ನೀಡಬೇಕು ಇವತ್ತಿನಿಂದ ವೇಮಗಲ್, ನರಸಾಪುರ, ಹೊಸಕೋಟೆ ವಿಧಾನಸೌಧ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಮುಂದಿನ ದಿನಗಳಲ್ಲಿ ಮತ್ತೊಂದು ಮಾರ್ಗ ವೇಮಗಲ್ ವಿಜಯಪುರ, ಯಲಹಂಕ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವಿಧಾನಸೌಧ ಮಾರ್ಗವಾಗಿ ಬೆಂಗಳೂರಿಗೆ ಹೊಸ ಮಾರ್ಗ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಂ ಮುನಿಯಪ್ಪ ಮಾತನಾಡಿ ಈ ಭಾಗದ ಉದ್ಯೋಗಸ್ಥರ ಬಹು ವರ್ಷಗಳ ಬೇಡಿಕೆಯಾದ ಬೆಂಗಳೂರಿಗೆ ನೇರಮಾರ್ಗಕ್ಕೆ ಚಾಲನೆ ಮಾಡಿಲಾಗಿದೆ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಇದ್ದ ಅಷ್ಟು ಮಾರ್ಗಗಳನ್ನು ಪ್ರಾರಂಭಿಸಬೇಕು ಬೆಂಗಳೂರಿನಿAದ ವಾಪಸು ವೇಮಗಲ್ ಕೇಂದ್ರಕ್ಕೆ ಬರುವ ವ್ಯವಸ್ಥೆಯನ್ನು ಸಹ ಮಾಡಬೇಕು ಎಂದರು.

ವೇಮಗಲ್ ನರಸಾಪುರ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು ೪೫ ಮಾರ್ಗಗಳು ಮತ್ತು ತಾಲೂಕಿನಲ್ಲಿ ೧೦ ಮಾರ್ಗವನ್ನು ಮುಚ್ಚಲಾಗಿತ್ತು ಮಾರ್ಚ್ ನಂತರ ಅಮಾರ್ಗಗಳನ್ನು ಪ್ರಾರಂಭಿಸಲು ಶಾಸಕರು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಜನಕ್ಕೆ ಅವಶ್ಯಕತೆ ಇರುವ ಹಾಗೇ ಸೇವೆಯನ್ನು ಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಸದಸ್ಯರಾದ ದೀಪಾ ವೆಂಕಟೇಶ್, ಶಶಿಕಲಾ ನಾಗೇಶ್, ಮಂಜುಳಾ ಮುನಿರಾಜು, ನಟರಾಜ್, ತಾಸುಫ್ ಖಾನ್, ಘಟಕ ವ್ಯವಸ್ಥಾಪಕ ಶ್ರೀನಿವಾಸ್, ಪ್ರಾಧಿಕಾರದ ಸದಸ್ಯರಾದ ಶಿವಕುಮಾರ್, ಬಿ. ನಾಗರಾಜ್, ಚೌಡಪ್ಪ, ಆಶ್ರಯ ಸಮಿತಿ ಸದಸ್ಯ ಪೆರ್ಜೇನಹಳ್ಳಿ ನಾಗೇಶ್, ಮಂಜುನಾಥ್, ಜಮೀರ್ ಪಾಷ, ವಕೀಲ ಪಯಾಜ್ ಅಹಮದ್, ಮುಖಂಡರಾದ ಕನಕರಾಜು, ಮಡಿವಾಳ ಬೈರೇಗೌಡ, ರಾಮುಶಿವಣ್ಣ, ಮೇಡಹಾಳ ಮುನಿಅಂಜಿನಪ್ಪ, ಸುಧಾಕರ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ವೇಮಗಲ್ ಬೆಂಗಳೂರು ನಡುವೆ ಗುರುವಾರ ನೇರ ಬಸ್ ಸಂಚಾರ ಆರಂಭವಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande